ಏಷ್ಯಾಕಪ್ ವಿವಾದ: ಹಾರಿಸ್ ರವೂಫ್ ಗೆ ಕಠಿಣ ಶಿಕ್ಷೆ; ಸೂರ್ಯಕುಮಾರ್ ಯಾದವ್‌ಗೆ ದಂಡ
ಸೂರ್ಯಕುಮಾರ್ ಯಾದವ್ | ಹಾರಿಸ್ ರವೂಫ್
ದುಬೈ: ಐಸಿಸಿ ಏಷ್ಯಾಕಪ್ ಪಂದ್ಯಾವಳಿಯ ಹಲವು ಪಂದ್ಯಗಳಲ್ಲಿ ಹಲವು ಮಾದರಿ ನೀತಿ ಸಂಹಿತೆಗಳು ಉಲ್ಲಂಘನೆಯಾಗಿರುವುದನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ಅಧಿಕೃತವಾಗಿ ದೃಢಪಡಿಸಿದೆ.
ಮ್ಯಾಚ್ ರೆಫರಿಗಳನ್ನು ಹೊಂದಿದ ಐಸಿಸಿ ಎಲೈಟ್ ಪ್ಯಾನಲ್ ಈ ಸಂಬಂಧ ವಿಚಾರಣೆಯನ್ನು ಪೂರ್ಣಗೊಳಿಸಿದ್ದು, ಸೆ. 14, 21 ಮತ್ತು 28ರ ಭಾರತ- ಪಾಕಿಸ್ತಾನ ಪಂದ್ಯಗಳ ವೇಳೆ ನಡೆದ ಉಲ್ಲಂಘನೆ ಬಗ್ಗೆ ವಿಚಾರಣೆ ನಡೆಸಿದೆ. ಈ ಪಂದ್ಯಗಳ ವೇಳೆ ಉಭಯ ತಂಡಗಳಿಂದ ಪ್ರಚೋದನಕಾರಿ ಸಂಕೇತ- ಪ್ರತಿ ಸಂಕೇತಗಳ ವಿನಿಮಯವಾಗಿತ್ತು.
ಪಾಕಿಸ್ತಾನ ವಿರುದ್ಧದ ಏಷ್ಯಾಕಪ್ ಗುಂಪು ಹಂತದ ಪಂದ್ಯದ ವೇಳೆ "ಪೆಹಲ್ಗಾಮ್ ಶ್ರದ್ಧಾಂಜಲಿ" ಉಲ್ಲೇಖ ಮಾಡಿದ್ದಕ್ಕಾಗಿ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರಿಗೆ ಪಂದ್ಯದ ಶೇಕಡ 30ರಷ್ಟು ಗೌರವಧನವನ್ನು ದಂಡವಾಗಿ ವಿಧಿಸಲಾಗಿದೆ. ಪಾಕ್ ವಿರುದ್ಧ ಏಳು ವಿಕೆಟ್ಗಳ ಗೆಲುವಿನ ಬಳಿಕ ಯಾದವ್, ಈ ಗೆಲುವು ಭಾರತದ ಸಶಸ್ತ್ರ ಪಡೆಗಳಿಗೆ ಮತ್ತು ಪೆಹಲ್ಗಾಮ್ ದಾಳಿಯ ಸಂತ್ರಸ್ತಿಗೆ ಸಮರ್ಪಣೆಯಾಗುತ್ತದೆ ಎಂದು ಘೋಷಿಸಿದ್ದರು. ಇದರ ವಿರುದ್ಧ ಪಾಕಿಸ್ತಾನ ದೂರು ನೀಡಿತ್ತು.
ಏಷ್ಯಾಕಪ್ ನ ಸೂಪರ್ ಫೋರ್ ಮತ್ತು ಫೈನಲ್ ವೇಳೆ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ವೇಗದ ಬೌಲರ್ ಹಾರೀಸ್ ರವೂಫ್ ತೀವ್ರ ದಂಡನೆಗೆ ಒಳಗಾಗಿದ್ದು, ಸಹ ಆಟಗಾರ ಶಹೀಬ್ ಝಾದಾ ಫರ್ಹಾನ್ ಅವರಿಗೆ ಎಚ್ಚರಿಕೆ ನೀಡಲಾಗಿದೆ. ರವೂಫ್ ಗೆ ಸಂಭಾವನೆಯ ಶೇಕಡ 30ರಷ್ಟು ದಂಡದ ಜತೆಗೆ ಪ್ರಚೋದನಕಾರಿ ಸಂಕೇತಕ್ಕಾಗಿ ಅಮಾನತು ಶಿಕ್ಷೆಯನ್ನೂ ವಿಧಿಸಲಾಗಿದೆ.