ನೇಪಾಳ ವಿರುದ್ಧ ಏಶ್ಯಕಪ್ ಪಂದ್ಯ: ಟಾಸ್ ಜಯಿಸಿ ಫೀಲ್ಡಿಂಗ್ ಆಯ್ದುಕೊಂಡ ಭಾರತ
Update: 2023-09-04 15:02 IST
Phoyo: PTI
ಪಲ್ಲೆಕೆಲೆ: ನೇಪಾಳ ವಿರುದ್ಧ ಏಶ್ಯಕಪ್ ನ ಗ್ರೂಪ್ 'ಎ' ಪಂದ್ಯದಲ್ಲಿ ಟಾಸ್ ಜಯಿಸಿದ ಭಾರತದ ನಾಯಕ ರೋಹಿತ್ ಶರ್ಮಾ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದ್ದಾರೆ.
ಟಾಸ್ ಪ್ರಕ್ರಿಯೆ ಆದ ತಕ್ಷಣವೇ ಕ್ಯಾಂಡಿ ನಗರದಲ್ಲಿ ತುಂತುರು ಮಳೆ ಶುರುವಾಗಿದೆ.
ವೈಯಕ್ತಿಕ ಕಾರಣಕ್ಕೆ ಮುಂಬೈಗೆ ವಾಪಸಾಗಿದ್ದ ವೇಗದ ಬೌಲರ್ ಜಸ್ ಪ್ರೀತ್ ಬುಮ್ರಾ ಬದಲಿಗೆ ಭಾರತವು ಮುಹಮ್ಮದ್ ಶಮಿಗೆ ಅವಕಾಶ ನೀಡಿದೆ. ನೇಪಾಳ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು, ಆರಿಫ್ ಶೇಖ್ ಬದಲಿಗೆ ಭೀಮ್ ಶಾರ್ಕಿ ಆಡಲಿದ್ದಾರೆ.
ಶನಿವಾರ ಭಾರತ ಹಾಗೂ ಪಾಕಿಸ್ತಾನ ಆಡಿದ್ದ ಮೈದಾನದಲ್ಲೇ ಇಂದಿನ ಪಂದ್ಯ ನಡೆಯಲಿದೆ. ಆ ಪಂದ್ಯದಲ್ಲಿ ಪಾಕಿಸ್ತಾನದ ವೇಗದ ಬೌಲರ್ ಗಳು ಎಲ್ಲ 10 ವಿಕೆಟ್ ಗಳನ್ನು ಕಬಳಿಸಿದ್ದರು.