×
Ad

ಏಶ್ಯಕಪ್: ಭಾರತದ ಆಟಗಾರರಿಗೆ ಪಾನೀಯ ವಿತರಿಸಿ ಆನಂದಿಸಿದ ವಿರಾಟ್ ಕೊಹ್ಲಿ!

Update: 2023-09-15 20:38 IST

Photo: Video grab

ಹೊಸದಿಲ್ಲಿ: ಆಧುನಿಕ ಯುಗದ ಶ್ರೇಷ್ಠ ಆಟಗಾರ ವಿರಾಟ್ ಕೊಹ್ಲಿ ಅವರು ಆಡಲಿ ಇಲ್ಲವೇ ಆಡದೇ ಇರಲಿ ಅವರು ಕ್ರಿಕೆಟ್ ಅಭಿಮಾನಿಗಳಿಗೆ ಮನರಂಜನೆ ನೀಡುವುದನ್ನು ತಪ್ಪಿಸುವುದಿಲ್ಲ . ಶುಕ್ರವಾರ ಏಶ್ಯಕಪ್ ನಲ್ಲಿ ಬಾಂಗ್ಲಾದೇಶದ ವಿರುದ್ಧ ಸೂಪರ್-4 ಪಂದ್ಯಕ್ಕೆ ವಿಶ್ರಾಂತಿ ಪಡೆದಿರುವ ಕೊಹ್ಲಿ ಅವರು ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ಸಹ ಆಟಗಾರರಿಗೆ ಪಾನೀಯವನ್ನು ವಿತರಿಸುವ ವೇಳೆ ಸಂಪೂರ್ಣ ಆನಂದಿಸುತ್ತಿರುವುದು ಕಂಡುಬಂತು.

ಕೊಹ್ಲಿ ಅವರು ಪಾನೀಯ ವಿರಾಮದ ಸಮಯದಲ್ಲಿ ತಮ್ಮ ಕೈಯಲ್ಲಿ ಬ್ಯಾಗ್ ಹಿಡಿದು ಆಟಗಾರರ ಕಡೆಗೆ ಓಡಿಬಂದರು, ಅಧಿಕೃತ ಪ್ರಸಾರಕ ಸ್ಟಾರ್ ಸ್ಪೋರ್ಟ್ ನ ಕ್ಯಾಮರಾ ಮೆನ್ ನಿಂದ ಹಿಡಿದು ಮೈದಾನದಲ್ಲಿ ನೆರೆದಿದ್ದ ಪ್ರೇಕ್ಷಕರವರೆಗೆ ಎಲ್ಲರ ಗಮನವನ್ನು ಕೊಹ್ಲಿ ತನ್ನತ್ತ ಸೆಳೆದರು.

ಕೊಹ್ಲಿ ಬಾಂಗ್ಲಾ ವಿರುದ್ದ ಪಂದ್ಯಕ್ಕೆ ವಿಶ್ರಾಂತಿ ಪಡೆದಾಗ ಕೊಹ್ಲಿ ಅಭಿಮಾನಿಗಳಿಗೆ ನಿರಾಶೆಯಾಗಿತ್ತು. ಆದರೆ ಪಾನೀಯ ವಿತರಿಸಲು ಮೈದಾನಕ್ಕೆ ಬಂದಿದ್ದ ಕೊಹ್ಲಿಯನ್ನು ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ.

ಭಾರತ ನಾಯಕ ರೋಹಿತ್ ಶರ್ಮಾ ಬಾಂಗ್ಲಾದೇಶ ವಿರುದ್ಧ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಭಾರತವು ತನ್ನ ಆಡುವ 11ರ ಬಳಗದಲ್ಲಿ ಐದು ಬದಲಾವಣೆಗಳನ್ನು ಮಾಡಿದೆ, ಕೊಹ್ಲಿ, ಹಾರ್ದಿಕ್ ಪಾಂಡ್ಯ, ಮುಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ ಹಾಗೂ ಕುಲದೀಪ್ ಯಾದವ್ ಅವರಿಗೆ ವಿಶ್ರಾಂತಿ ನೀಡಲಾಗಿದೆ.

ತಿಲಕ್ ವರ್ಮಾ ಅವರು ಏಕದಿನ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದರೆ, ಮುಹಮ್ಮದ್ ಶಮಿ, ಪ್ರಸಿದ್ಧ್ ಕೃಷ್ಣ, ಶಾರ್ದೂಲ್ ಠಾಕೂರ್ ಹಾಗೂ ಸೂರ್ಯಕುಮಾರ್ ಯಾದವ್ ಕೂಡ ಆಡುವ ಬಳಗದಲ್ಲಿ ಸ್ಥಾನ ಪಡೆದರು.

ಬಾಂಗ್ಲಾದೇಶ ಕೂಡ ತಂಝೀಬ್ ಶಕೀಬ್ಗೆ ಚೊಚ್ಚಲ ಏಕದಿನ ಪಂದ್ಯವನ್ನು ಆಡುವ ಅವಕಾಶ ನೀಡಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News