100 ವರ್ಷಗಳ ನಂತರ ಎರಡೇ ದಿನದಲ್ಲಿ ಅಂತ್ಯಗೊಂಡ ಪಂದ್ಯ
Update: 2025-11-22 21:42 IST
Photo Credit : PTI
ಪರ್ತ್, ನ.22: ಮೊದಲ ಆ್ಯಶಸ್ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯ ತಂಡವು ಎರಡು ದಿನದೊಳಗೆ ಇಂಗ್ಲೆಂಡ್ ತಂಡವನ್ನು 8 ವಿಕೆಟ್ ಗಳ ಅಂತರದಿಂದ ಮಣಿಸಿದೆ.100ಕ್ಕೂ ಅಧಿಕ ವರ್ಷಗಳ ನಂತರ ಆ್ಯಶಸ್ ಪಂದ್ಯವು ಬೇಗನೆ ಕೊನೆಗೊಂಡಿದೆ.
1921ರಲ್ಲಿ ನಾಟಿಂಗ್‌ಹ್ಯಾಮ್‌ನಲ್ಲಿ ಆಸ್ಟ್ರೇಲಿಯ ತಂಡವು ಇಂಗ್ಲೆಂಡ್ ವಿರುದ್ದ ಎರಡು ದಿನದೊಳಗೆ ಪಂದ್ಯವನ್ನು ಜಯಿಸಿತ್ತು.
ಗೆಲ್ಲಲು 205 ರನ್ ಗುರಿ ಪಡೆದಿದ್ದ ಆಸ್ಟ್ರೇಲಿಯ ತಂಡವು ಸುಲಭವಾಗಿ ಗೆಲುವಿನ ದಡ ಸೇರಿತು.