×
Ad

ಕೆನಡ ಓಪನ್ 2025 ಬ್ಯಾಡ್ಮಿಂಟನ್ ಪಂದ್ಯಾವಳಿ | ಕಿಡಂಬಿ ಶ್ರೀಕಾಂತ್ ಗೆ ಸೆಮಿಫೈನಲ್‌ ನಲ್ಲಿ ಸೋಲು

Update: 2025-07-06 21:01 IST

Photo Credit: PTI

ಓಂಟಾರಿಯೊ: ಕೆನಡ ಓಪನ್ 2025 ಬ್ಯಾಡ್ಮಿಂಟನ್ ಪಂದ್ಯಾವಳಿಯ ಸೆಮಿಫೈನಲ್‌ ನಲ್ಲಿ ಶನಿವಾರ ಭಾರತದ ಕಿಡಂಬಿ ಶ್ರೀಕಾಂತ್ ಸೋಲನುಭವಿಸಿದ್ದಾರೆ. ಇದರೊಂದಿಗೆ ಈ ವರ್ಷದ ಬಿಡಬ್ಲ್ಯುಎಫ್ ಟೂರ್ನಲ್ಲಿ ಎರಡನೇ ಫೈನಲ್ ತಲುಪುವಲ್ಲಿ ಅವರು ವಿಫಲರಾದರು.

ಅವರನ್ನು ಮೂರನೇ ಶ್ರೇಯಾಂಕದ ಜಪಾನ್ನ ಕೆಂಟ ನಿಶಿಮೊಟೊ 19-21, 21-14, 21-18 ಗೇಮ್‌ ಗಳಿಂದ ಸೋಲಿಸಿದರು. ಪಂದ್ಯವು ಒಂದು ಗಂಟೆ 18 ನಿಮಿಷಗಳ ಕಾಲ ನಡೆಯಿತು.

ಈ ವರ್ಷದ ಆದಿ ಭಾಗದಲ್ಲಿ, ಅವರು ಬಿಡಬ್ಲ್ಯುಎಫ್ ಸೂಪರ್ 500 ಮಲೇಶ್ಯ ಮಾಸ್ಟರ್ಸ್ ಪಂದ್ಯಾವಳಿಯಲ್ಲಿ ಫೈನಲ್ ತಲುಪಿದ್ದರು. ಫೈನಲ್‌ ನಲ್ಲಿ ಅವರನ್ನು ಚೀನಾದ ಲಿ ಶಿಫೆಂಗ್ ನೇರ ಗೇಮ್‌ ಗಳಿಂದ ಸೋಲಿಸಿದ್ದರು.

ಪ್ರಿಕ್ವಾರ್ಟರ್ಫೈನಲ್ ಮತ್ತು ಕ್ವಾರ್ಟರ್ಫೈನಲ್ ಪಂದ್ಯಗಳಲ್ಲಿ ಅವರು ಕ್ರಮವಾಗಿ ಚೈನೀಸ್ ತೈಪೆಯ ವಾಂಗ್ ಪೊ ವೇ ಮತ್ತು ಚೈನೀಸ್ ತೈಪೆಯವರೇ ಆದ ಅಗ್ರ ಶ್ರೇಯಾಂಕದ ಚೌ ಟಿಯನ್ ಚೆನ್ರನ್ನು ಸೋಲಿಸಿದ್ದರು.

ಶ್ರೀಕಾಂತ್ರ ಸೋಲಿನೊಂದಿಗೆ, ಬಿಡಬ್ಲ್ಯುಎಫ್ ಸೂಪರ್ 300 ಪಂದ್ಯಾವಳಿಯಲ್ಲಿ ಭಾರತೀಯ ಸವಾಲು ಅಂತ್ಯಗೊಂಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News