ಟಿ-20 ಕ್ರಿಕೆಟ್| ಮೂರನೇ ಅತಿ ವೇಗದ ಅರ್ಧಶತಕ ಸಿಡಿಸಿದ ಶಿವಂ ದುಬೆ
ಶಿವಂ ದುಬೆ | Photo Credit : PTI
ವಿಶಾಖಪಟ್ಟಣ, ಜ.29: ನ್ಯೂಝಿಲ್ಯಾಂಡ್ ತಂಡದ ವಿರುದ್ಧ ಬುಧವಾರ ನಡೆದ ನಾಲ್ಕನೇ ಟಿ-20 ಅಂತರ್‌ರಾಷ್ಟ್ರೀಯ ಪಂದ್ಯದ ವೇಳೆ ಆಲ್‌ರೌಂಡರ್ ಶಿವಂ ದುಬೆ ಮೂರನೇ ಅತಿ ವೇಗದ ಅರ್ಧಶತಕ ದಾಖಲಿಸಿದ ಭಾರತದ ಮೂರನೇ ಆಟಗಾರ ಎನಿಸಿಕೊಂಡಿದ್ದಾರೆ.
ವೇಗದ ಬೌಲರ್ ಜೇಕಬ್ ಡಫಿ ಎಸೆದ ಫುಲ್‌ಟಾಸ್ ಅನ್ನು ಸಿಕ್ಸರ್‌ಗೆ ಅಟ್ಟಿದ ದುಬೆ ಕೇವಲ 15 ಎಸೆತಗಳಲ್ಲಿ 50 ರನ್ ಪೂರೈಸಿದರು.
ಲೆಗ್ ಸ್ಪಿನ್ನರ್ ಇಶ್ ಸೋಧಿ ಓವರ್‌ವೊಂದರಲ್ಲಿ ಎರಡು ಬೌಂಡರಿ ಹಾಗೂ ಮೂರು ಸಿಕ್ಸರ್‌ಗಳ ಸಹಿತ 29 ರನ್ ಸಿಡಿಸಿದರು.
ಭಾರತೀಯ ಆಟಗಾರರ ಪೈಕಿ ಯುವರಾಜ್ ಸಿಂಗ್(12 ಎಸೆತಗಳು)ಹಾಗೂ ಅಭಿಷೇಕ್ ಶರ್ಮಾ(15 ಎಸೆತಗಳು)ಮಾತ್ರ ದುಬೆಗಿಂತ ವೇಗವಾಗಿ ಅರ್ಧಶತಕ ಗಳಿಸಿದ್ದಾರೆ. ಕಳೆದ ವರ್ಷ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಹಾರ್ದಿಕ್ ಪಾಂಡ್ಯ 16 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದು, ಇದು ಭಾರತೀಯ ಆಟಗಾರನ ನಾಲ್ಕನೇ ವೇಗದ ಅರ್ಧಶತಕವಾಗಿದೆ.
ಟಿ-20 ಕ್ರಿಕೆಟ್‌ನಲ್ಲಿ ವೇಗದ ಅರ್ಧಶತಕ ಗಳಿಸಿದ ಭಾರತೀಯರು
ಯುವರಾಜ್ ಸಿಂಗ್-12 ಎಸೆತಗಳು-ಇಂಗ್ಲೆಂಡ್ ವಿರುದ್ಧ-ಡರ್ಬನ್(2007)
ಅಭಿಷೇಕ್ ಶರ್ಮಾ-14 ಎಸೆತಗಳು-ನ್ಯೂಝಿಲ್ಯಾಂಡ್ ವಿರುದ್ಧ-ಗುವಾಹಟಿ(2026)
ಶಿವಂ ದುಬೆ-15 ಎಸೆತಗಳು-ನ್ಯೂಝಿಲ್ಯಾಂಡ್ ವಿರುದ್ಧ-ವಿಶಾಖಪಟ್ಟಣ(2026)
ಹಾರ್ದಿಕ್ ಪಾಂಡ್ಯ-16 ಎಸೆತಗಳು-ದಕ್ಷಿಣ ಆಫ್ರಿಕಾ ವಿರುದ್ಧ-ಅಹ್ಮದಾಬಾದ್(2025)
ಅಭಿಷೇಕ್ ಶರ್ಮಾ-17 ಎಸೆತಗಳು-ಇಂಗ್ಲೆಂಡ್ ವಿರುದ್ಧ-ಮುಂಬೈ(2025)