Photo: X

ಬೆಂಗಳೂರು: ಮಹಿಳೆಯರ ಅಂತರ್ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಸ್ಕೋರರ್ ಎನಿಸಿಕೊಂಡಿರುವ ಸ್ಮೃತಿ ಮಂಧಾನಗೆ ಆರ್‌ಸಿಬಿ ಮುಖ್ಯ ಕೋಚ್ ಎಂ.ರಂಗರಾಜನ್, ಸಹ ಆಟಗಾರ್ತಿಯರಾದ ಅರುಂಧತಿ ರೆಡ್ಡಿ ಹಾಗೂ ರಾಧಾ ಯಾದವ್ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಎಡಗೈ ಆಟಗಾರ್ತಿ ಸ್ಮೃತಿ ಎಲ್ಲ ಮಾದರಿಯ ಕ್ರಿಕೆಟ್‌ನಲ್ಲಿ 10,880 ರನ್ ಗಳಿಸಿದ್ದು, ಭಾರತದ ಮಾಜಿ ನಾಯಕಿ ಮಿಥಾಲಿ ರಾಜ್ ದಾಖಲೆ(10,868)ಮುರಿದರು. ಮಹಿಳೆಯರ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಸಿಡಿಸಿದ್ದಾರೆ.

ಆರ್‌ಸಿಬಿ ಮಹಿಳಾ ತಂಡವು ಸತತ ಎರಡು ಬಾರಿ ಡಬ್ಲ್ಯುಪಿಎಲ್ ಪ್ರಶಸ್ತಿಗಳನ್ನು ಜಯಿಸುವಲ್ಲಿ ಸ್ಮೃತಿ ಪ್ರಮುಖ ಪಾತ್ರವಹಿಸಿದ್ದಾರೆ. 35 ಇನಿಂಗ್ಸ್‌ಗಳಲ್ಲಿ 1,023 ರನ್ ಗಳಿಸಿ ಫ್ರಾಂಚೈಸಿಯ ಗರಿಷ್ಠ ರನ್ ಸ್ಕೋರರ್ ಆಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor