ಭಾರೀ ಮಳೆ: ಭಾರತ-ಪಾಕಿಸ್ತಾನ ಏಶ್ಯಕಪ್ ಪಂದ್ಯ ರದ್ದು
Update: 2023-09-02 22:09 IST
Photo: X | @BCCI
ಪಲ್ಲೆಕೆಲೆ, ಸೆ.2: ಭಾರತ ಹಾಗೂ ಪಾಕಿಸ್ತಾನ ನಡುವಿನ ಏಶ್ಯಕಪ್ನ ಗ್ರೂಪ್ ಎ ಪಂದ್ಯವು ಭಾರೀ ಮಳೆಯಿಂದಾಗಿ ರದ್ದಾಗಿದೆ. ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ 266 ರನ್ಗೆ ಆಲೌಟಾದ ಬೆನ್ನಿಗೆ ಭಾರೀ ಮಳೆ ಸುರಿದ ಪರಿಣಾಮ ಪಾಕ್ನ ರನ್ ಚೇಸಿಂಗ್ ಸಾಧ್ಯವಾಗಲಿಲ್ಲ.