ಹಾಂಕಾಂಗ್ ಓಪನ್: ತನಿಶಾ-ಅಶ್ವಿನಿ ಪ್ರಿ-ಕ್ವಾರ್ಟರ್ ಫೈನಲ್‌ಗೆ
Photo: IANS
ಕೌಲೂನ್(ಹಾಂಕಾಂಗ್): ಭಾರತದ ಮಹಿಳಾ ಡಬಲ್ಸ್ ಜೋಡಿ ತನಿಶಾ ಕ್ರಾಸ್ಟಾ ಹಾಗೂ ಅಶ್ವಿನಿ ಪೊನ್ನಪ್ಪ ಹಾಂಕಾಂಗ್ ಓಪನ್ ಸೂಪರ್-500 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪ್ರಿ-ಕ್ವಾರ್ಟರ್ ಫೈನಲ್ ತಲುಪಿದ್ದಾರೆ.
ತನಿಶಾ ಹಾಗೂ ಅಶ್ವಿನಿ ಚೈನೀಸ್ ತೈಪೆಯ ಲೀ ಚಿಯಾ ಸಿನ್ ಹಾಗೂ ಟೆಂಗ್ ಚುನ್ ಸನ್‌ರನ್ನು 21-19, 21-19 ನೇರ ಗೇಮ್‌ಗಳ ಅಂತರದಿಂದ ಮಣಿಸಿದರು. ಮುಂದಿನ ಸುತ್ತಿನಲ್ಲಿ ಅಗ್ರ ಶ್ರೇಯಾಂಕದ ಜಪಾನ್ ಜೋಡಿ ಮಯು ಮಟ್ಸುಮೊಟೊ ಹಾಗೂ ವಕಾನಾ ನಗಹರಾರನ್ನು ಎದುರಿಸಲಿದ್ದಾರೆ.
ಏಶ್ಯನ್ ಗೇಮ್ಸ್‌ನಲ್ಲಿ ಸ್ಪರ್ಧಿಸಲಿರುವ ಲಕ್ಷ್ಯ ಸೇನ್ ಬೆನ್ನುನೋವಿನ ಕಾರಣಕ್ಕೆ ಟೂರ್ನಮೆಂಟ್‌ನಿಂದ ಹಿಂದೆ ಸರಿದಿದ್ದಾರೆ.
ಮಹಿಳೆಯರ ಸಿಂಗಲ್ಸ್‌ನಲ್ಲಿ ಪ್ರಿಯಾಂಶು ರಾಜಾವತ್ ಜಪಾನ್‌ನ ಕಾಂಟಾ ಸುನೆಯಾಮಾ ವಿರುದ್ಧ 13-21, 14-21 ಅಂತರದಿಂದ ಸೋತಿದ್ದಾರೆ. ಮತ್ತೊಂದು ಸಿಂಗಲ್ಸ್ ಪಂದ್ಯದಲ್ಲಿ ಆಕರ್ಷಿ ಕಶ್ಯಪ್ ಅವರು ಜರ್ಮನಿಯ ಯುನ್ ಲಿ ವಿರುದ್ಧ 18-21, 10-21 ಅಂತರದಿಂದ ಸೋಲುಂಡಿದ್ದಾರೆ.
ಇನ್ನೊಂದು ಮಹಿಳೆಯರ ಸಿಂಗಲ್ಸ್ ಹಣಾಹಣಿಯಲ್ಲಿ ಮಾಳವಿಕಾ ಬಾನ್ಸೋಡ್ ಚೀನಾದ ಝಾಂಗ್ ಯಿ ಮಾನ್‌ರನ್ನು 21-14, 21-12 ಗೇಮ್‌ಗಳ ಅಂತರದಿಂದ ಮಣಿಸಿದರು.