×
Ad

ವಿಶ‍್ವಕಪ್ 2023: ಆಸ್ಟ್ರೇಲಿಯಾಕ್ಕೆ 307 ರನ್ ಗುರಿ ನೀಡಿದ ಬಾಂಗ್ಲಾದೇಶ

Update: 2023-11-11 14:55 IST

Photo: X/@BCBtigers

ಪುಣೆ: ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಸಂಘಟಿತ ಪ್ರದರ್ಶನ ನೀಡಿದ ಬಾಂಗ್ಲಾದೇಶ ತಂಡವು ಆಸ್ಟ್ರೇಲಿಯಾಕ್ಕೆ 307 ರನ್ ಗಳ ಗುರಿ ನೀಡಿದೆ.

ಟಾಸ್ ಸೋತು ಬ್ಯಾಟಿಂಗ್ ಗೆ ಇಳಿದ ಬಾಂಗ್ಲಾದೇಶ ತಂಡವು, ಮಧ್ಯಮ ಕ್ರಮಾಂಕದ ಬ್ಯಾಟರ್ ತೌಹಿದ್ ಹೃದಾಯ್ (74) ಸಿಡಿಸಿದ ಅರ್ಧ ಶತಕ ಹಾಗೂ ಆರಂಭಿಕ ಬ್ಯಾಟರ್ ಗಳಾದ ತಂಝೀದ್ ಹಸನ್ (36) ಹಾಗೂ ಲಿಟನ್ ದಾಸ್ (36), ಮಧ್ಯಮ ಕ್ರಮಾಂಕದ ಬ್ಯಾಟರ್ ಗಳಾದ ನಜ್ಮುಲ್ ಹುಸೈನ್ ಶಾಂಟೊ (45) ಹಾಗೂ ಮಹ್ಮದುಲ್ಲಾ (32) ಅವರ ಅಮೂಲ್ಯ ರನ್ ಗಳ ನೆರವಿನಿಂದ ಆಸ್ಟ್ರೇಲಿಯಾ ತಂಡದೆದುರು 306 ರನ್ ಗಳ ಸವಾಲಿನ ಮೊತ್ತವನ್ನು ಪೇರಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News