×
Ad

ಭಾರತ-ನ್ಯೂಝಿಲ್ಯಾಂಡ್ ತೃತೀಯ ಟೆಸ್ಟ್ | ಎರಡನೆ ಇನಿಂಗ್ಸ್ ನಲ್ಲೂ ಕುಸಿತ ಕಂಡ ಭಾರತ

Update: 2024-11-03 11:57 IST

Photo:X/BCCI

ಮುಂಬೈ: ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನ್ಯೂಝಿಲೆಂಡ್ ವಿರುದ್ಧದ ತೃತೀಯ ಹಾಗೂ ಅಂತಿಮ ಟೆಸ್ಟ್ ಪಂದ್ಯದ ಎರಡನೆ ಇನಿಂಗ್ಸ್ ನಲ್ಲೂ ಕುಸಿತ ಕಂಡಿರುವ ಭಾರತ ತಂಡ, ಇತ್ತೀಚಿನ ವರದಿಗಳ ಪ್ರಕಾರ, ಆರು ವಿಕೆಟ್ ನಷ್ಟಕ್ಕೆ 92 ರನ್ ಗಳಿಸಿದೆ.

147 ರನ್ ಗಳ ಅಲ್ಪ ಮೊತ್ತದ ಗೆಲುವಿನ ಗುರಿಯನ್ನು ಪಡೆದ ಭಾರತ ತಂಡ ಮತ್ತೆ ಆರಂಭಿಕ ಆಘಾತಕ್ಕೆ ತುತ್ತಾಯಿತು. ಕೇವಲ 29 ರನ್ ಗಳಾಗುವಷ್ಟರಲ್ಲಿ 5 ಪ್ರಮುಖ ವಿಕೆಟ್ ಗಳನ್ನು ಕಳೆದುಕೊಂಡು ಮತ್ತೆ ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಗೆ ತುತ್ತಾಗಿತ್ತು. ಈ ಹಂತದಲ್ಲಿ ತಂಡಕ್ಕೆ ಆಸರೆಯಾದ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ 53 ರನ್ ಗಳೊಂದಿಗೆ ಅಜೇಯವಾಗುಳಿದಿದ್ದಾರೆ. ಮತ್ತೊಂದು ತುದಿಯಲ್ಲಿ 6 ರನ್ ಗಳಿಸಿ ವಾಷಿಂಗ್ಟನ್ ಸುಂದರ್ ಆಡುತ್ತಿದ್ದಾರೆ.

ಭಾರತ ತಂಡಕ್ಕೆ ಈ ಪಂದ್ಯದಲ್ಲಿ ಗೆಲುವು ಸಾಧಿಸಲು ಇನ್ನೂ 55 ರನ್ ಗಳ ಅಗತ್ಯವಿದ್ದು, 4 ವಿಕೆಟ್ ಗಳು ಮಾತ್ರ ಬಾಕಿಯುಳಿದಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News