ಇಂಡಿಯಾ ಓಪನ್: ಮೊದಲ ಬಾರಿ ಎಚ್. ಎಸ್. ಪ್ರಣಯ್ ಸೆಮಿ ಫೈನಲ್ ಗೆ
Update: 2024-01-20 21:34 IST
ಎಚ್.ಎಸ್. ಪ್ರಣಯ್ | Photo: PTI
ಹೊಸದಿಲ್ಲಿ: ಭಾರತದ ಶಟ್ಲರ್ ಎಚ್.ಎಸ್. ಪ್ರಣಯ್ ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿರುವ ಇಂಡಿಯಾ ಓಪನ್ ಸೂಪರ್ 750 ಬ್ಯಾಡ್ಮಿಂಟನ್ ಟೂರ್ನಮೆಂಟ್ ನಲ್ಲಿ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಸೆಮಿ ಫೈನಲ್ ಗೆ ತಲುಪಿದ್ದಾರೆ.
ಕಳೆದ ವರ್ಷ ಏಶ್ಯನ್ ಗೇಮ್ಸ್ ಹಾಗೂ ವಿಶ್ವ ಚಾಂಪಿಯನ್ಶಿಪ್ ಗಳಲ್ಲಿ ಕಂಚಿನ ಪದಕಗಳನ್ನು ಜಯಿಸಿದ್ದ 31ರ ಹರೆಯದ ಪ್ರಣಯ್ ಎರಡನೇ ಗೇಮ್ ಸೋಲಿನಿಂದ ಬೇಗನೆ ಚೇತರಿಸಿಕೊಂಡು 77 ನಿಮಿಷಗಳ ಕಾಲ ನಡೆದ ಹಣಾಹಣಿಯಲ್ಲಿ 28ನೇ ರ್ಯಾಂಕಿನ ವಾಂಗ್ ಝು ವೀ ಅವರನ್ನು 21-11, 17-21, 21-18 ಅಂತರದಿಂದ ಸೋಲಿಸಿದರು. ಈ ಗೆಲುವಿನ ಮೂಲಕ ಪ್ರಣಯ್ ಇದೇ ಮೊದಲ ಬಾರಿ ಇಂಡಿಯಾ ಓಪನ್ ಟೂರ್ನಿಯಲ್ಲಿ ಸೆಮಿ ಫೈನಲ್ ತಲುಪಿದ್ದಾರೆ.