×
Ad

ಆ್ಯಂಡರ್ಸನ್ ಓವರ್ ನಲ್ಲಿ ಸತತ 3 ಸಿಕ್ಸರ್ ಸಿಡಿಸಿದ ಜೈಸ್ವಾಲ್

Update: 2024-02-18 22:19 IST

ರಾಜ್ಕೋಟ್: ಭಾರತದ ಭವಿಷ್ಯದ ತಾರೆ ಯಶಸ್ವಿ ಜೈಸ್ವಾಲ್ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ನ ನಾಲ್ಕನೇ ದಿನವಾದ ರವಿವಾರ ತನ್ನ ಸಿಕ್ಸರ್ ಗಳನ್ನು ಬಾರಿಸುವ ಸಾಮರ್ಥ್ಯ ವನ್ನು ಪ್ರದರ್ಶಿಸಿದರು. ಅವರು ತನ್ನ ದ್ವಿಶತಕದ ಹಾದಿಯಲ್ಲಿ, ಇಂಗ್ಲೆಂಡ್ನ ಜೇಮ್ಸ್ ಆ್ಯಂಡರ್ಸನ್ ಒವರ್ ಒಂದರಲ್ಲಿ ಮೂರು ಸತತ ಸಿಕ್ಸರ್ ಗಳನ್ನು ಬಾರಿಸಿದರು.

ಆ್ಯಂಡರ್ಸನ್ ಎಸೆದ ಫುಲ್-ಟಾಸ್ ಚೆಂಡನ್ನು ಜೈಸ್ವಾಲ್ ಲೆಗ್ ಸೈಡ್ನಲ್ಲಿ ಸಿಕ್ಸರ್ ನತ್ತ ತಳ್ಳಿದರು. ಮುಂದಿನ ಎಸೆತದಲ್ಲಿ ಕ್ರೀಸ್ ಬಿಟ್ಟು ಎದುರು ಹೋದ ಅವರು ಕವರ್ ಫೀಲ್ಡರ್ ನ ತಲೆಯ ಮೇಲಿನಿಂದಾಗಿ ಸಿಕ್ಸರ್ ನತ್ತ ಬಾರಿಸಿದರು.

ಮೂರನೇ ಎಸೆತದಲ್ಲಿ, ಜೈಸ್ವಾಲ್ ಒಂದು ಹೆಜ್ಜೆ ಹಿಂದೆ ಹೋಗಿ ಸತತ ಮೂರನೇ ಸಿಕ್ಸರ್ ಸಿಡಿಸಿದರು.

ಆಗ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಮುಂದೆ ಬಂದು ಬೌಲರ್ ಆ್ಯಂಡರ್ಸನ್ ಜೊತೆ ಮಾತನಾಡುತ್ತಿರುವುದು ಕಂಡುಬಂತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News