×
Ad

ವಿಶ್ವಕಪ್: ಆರಂಭಿಕ ಆಘಾತದಿಂದ ಚೇತರಿಸಿಕೊಂಡ ಕಿವೀಸ್

Update: 2023-10-22 16:40 IST

Photo:X/cricketworldcup.com/

ದರ್ಮಶಾಲ: ಇಲ್ಲಿನ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಶನ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ 2023 ಟೂರ್ನಿಯ ಭಾರತದ ವಿರುದ್ಧ ಆರಂಭಿಕ ಆಘಾತದ ಹೊರತಾಗಿಯೂ ನ್ಯೂಝಿಲ್ಯಾಂಡ್ ಚೇತರಿಸಿಕೊಂಡಿದೆ.

ನ್ಯೂಝಿಲ್ಯಾಂಡ್ ವಿರುದ್ಧ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿದ ಭಾರತ ಆರಂಭಿಕ ಬ್ಯಾಟರ್ ಡೇವಾನ್ ಕಾನ್ವೆ ಹಾಗೂ ವಿಲ್ ಯಂಗ್ ಔಟ್ ಮಾಡುವ ಮೂಲಕ ಉತ್ತಮ ಮುನ್ನಡೆ ಪಡೆಯಿತು. ಆದರೆ ಬಳಿಕ ಒಂದಾದ ರಚಿನ್ ರವೀಂದ್ರ ಮತ್ತು ಡ್ಯಾರಿಲ್ ಮಿಚೆಲ್ ಜೋಡಿ ಭಾರತದ ಬೌಲಿಂಗ್ ಅನ್ನು ಸಮರ್ಥವಾಗಿ ಎದುರಿಸಿ ಪರಸ್ಪರ ಅರ್ಧಶತಕ ಸಿಡಿಸಿದರು. ರಚಿನ್ ರವೀಂದ್ರ 6 ಬೌಂಡರಿ 1 ಸಿಕ್ಸರ್ ಸಹಿತ 75 ಬಾರಿಸಿ ಶಮಿಗೆ ವಿಕೆಟ್ ಒಪ್ಪಿಸಿದರು. ಡೇರಿಲ್ ಮಿಚೆಲ್3 ಬೌಂಡರಿ4 ಸಿಕ್ಸರ್ ಸಹಿತ 69 ಬಾರಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ.

ನ್ಯೂಝಿಲ್ಯಾಂಡ್ 33.3 ಓವರ್ ನಲ್ಲಿ 3 ವಿಕೆಟ್ ಕಳೆದುಕೊಂಡು 178 ರನ್ ಬಾರಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News