×
Ad

ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಪ್ರಕರಣ: ನೇಪಾಳದ ಕ್ರಿಕೆಟಿಗ ಸಂದೀಪ್ ಲಮಿಚಾನೆ ದೋಷಿ

Update: 2023-12-29 23:34 IST

Photo: www.cricnepal.com

 ಹೊಸದಿಲ್ಲಿ: ನೇಪಾಳದ ರಾಷ್ಟ್ರೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಸಂದೀಪ್ ಲಮಿಚಾನೆಯನ್ನು ಶುಕ್ರವಾರ ಕಠ್ಮಂಡುವಿನ ನ್ಯಾಯಾಲಯವೊಂದು ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ದೋಷಿ ಎಂದು ತೀರ್ಪು ನೀಡಿದೆ.

ಕಠ್ಮಂಡುವಿನ ಹೊಟೇಲ್ ಕೊಠಡಿಯಲ್ಲಿ ಸಂದೀಪ್ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎಂದು 17ರ ವಯಸ್ಸಿನ ಹುಡುಗಿ ಆರೋಪಿಸಿದ ನಂತರ ಬಂಧಿಸಲಾಗಿತ್ತು. ಈ ವರ್ಷದ ಜನವರಿಯಲ್ಲಿ ಕ್ರಿಕೆಟಿಗನನ್ನು ಪಟಾನಿನ ಹೈಕೋರ್ಟ್ ಜಾಮೀನಿನ ಮೇಲೆ ಬಿಡುಗಡೆ ಮಾಡಲು ಆದೇಶಿಸಿತ್ತು.

23 ರ ವಯಸ್ಸಿನ ಸಂದೀಪ್ ನೇಪಾಳದ ಪ್ರಮುಖ ಕ್ರಿಕೆಟಿಗನಾಗಿದ್ದು, ಐಪಿಎಲ್ ನಲ್ಲಿ ಕಾಣಿಸಿಕೊಂಡ ನೇಪಾಳದ ಮೊದಲ ಆಟಗಾರನಾಗಿದ್ದರು. ಸಂದೀಪ್ 2018ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯ ಮೂಲಕ ಐಪಿಎಲ್ ಗೆ ಕಾಲಿಟ್ಟಿದ್ದರು.

ಕಳೆದ ರವಿವಾರ ಆರಂಭವಾದ ವಿಚಾರಣೆಯು ಪೂರ್ಣಗೊಂಡ ನಂತರ ಏಕಪೀಠದ ನೇತೃತ್ವವಹಿಸಿದ್ದ ನ್ಯಾಯಾಧೀಶ ಶಿಶಿರ್ ರಾಜ್ ಧಾಕಲ್ ಶುಕ್ರವಾರ ತೀರ್ಪು ನೀಡಿದರು.

ಕಠ್ಮಂಡುವಿನ ಜಿಲ್ಲಾ ನ್ಯಾಯಾಲಯವು ಸಂದೀಪ್ ಅತ್ಯಾಚಾರದ ಪ್ರಕರಣದಲ್ಲಿ ತಪ್ಪಿತಸ್ಥ ಎಂದು ತೀರ್ಪು ನೀಡಿದೆ. ನೇಪಾಳದ ಹಿರಿಯ ಕ್ರಿಕೆಟಿಗನಿಗೆ ಜೈಲು ಶಿಕ್ಷೆಯನ್ನು ನ್ಯಾಯಾಲಯವು ಮುಂದಿನ ವಿಚಾರಣೆಯಲ್ಲಿ ನಿರ್ಧರಿಸಲಿದೆ ಎಂದು ಕಠ್ಮಂಡು ಪೋಸ್ಟ್ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News