×
Ad

ಬಿಬಿಎಲ್ ಪಂದ್ಯ: ಪ್ಯಾಡ್, ಹೆಲ್ಮೆಟ್, ಗ್ಲೌಸ್ ಧರಿಸದೆ ಬ್ಯಾಟಿಂಗ್ ಗೆ ಧಾವಿಸಿದ ಹಾರಿಸ್ ರವೂಫ್!

Update: 2023-12-23 22:19 IST

ಹೊಸದಿಲ್ಲಿ: ಈ ಹಿಂದೆಂದೂ ನೋಡಿರದ ಘಟನೆಯೊಂದರಲ್ಲಿ ಸಿಡ್ನಿ ಥಂಡರ್ ವಿರುದ್ಧ ಶನಿವಾರ ಆಲ್ಬರಿಯಲ್ಲಿ ನಡೆದ ಬಿಬಿಎಲ್ ಟಿ-20 ಪಂದ್ಯದಲ್ಲಿ ಮೆಲ್ಬೋರ್ನ್ ಸ್ಟಾರ್ಸ್ ತಂಡದ 11ನೇ ಕ್ರಮಾಂಕದ ಬ್ಯಾಟರ್ ಹಾರಿಸ್ ರವೂಫ್ ಅವರು ಪ್ಯಾಡ್, ಹೆಲ್ಮೆಟ್ ಹಾಗೂ ಕೈಗವಸು ಧರಿಸದೆ ಬ್ಯಾಟಿಂಗ್ ಮಾಡಲು ಧಾವಿಸಿದರು.

ಮೆಲ್ಬೋರ್ನ್ ಸ್ಟಾರ್ಸ್ ತಂಡ ಇನಿಂಗ್ಸ್ ನ ಅಂತಿಮ ಓವರ್ನಲ್ಲಿ ಬೆನ್ನುಬೆನ್ನಿಗೆ ವಿಕೆಟ್ ಕಳೆದುಕೊಂಡಾಗ ಈ ಅಪರೂಪದ ಪ್ರಸಂಗ ನಡೆದಿದೆ.

ವೇಗದ ಬೌಲರ್ ಡೇನಿಯಲ್ ಸ್ಯಾಮ್ಸ್ ಎಸೆದ 20ನೇ ಓವರ್ನಲ್ಲಿ ಮೊದಲೆರಡು ಎಸೆತಗಳಲ್ಲಿ ಸಿಂಗಲ್ಸ್ ನೀಡಿದರು. ಆಗ ಸ್ಟಾರ್ಸ್ ತಂಡ 19.2 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಿತ್ತು. ಆದರೆ ಮೂರು ವಿಕೆಟ್ಗಳು ಸತತ ಎಸೆತಗಳಲ್ಲಿ ಉರುಳಿದಾಗ ಬ್ಯಾಟಿಂಗ್ಗೆ ಸಿದ್ಧತೆ ಮಾಡಿಕೊಳ್ಳದ ರವೂಫ್ ಟೈಮ್ ರೂಲ್ ಕಾರಣಕ್ಕೆ ಪ್ಯಾಡ್, ಹೆಲ್ಮೆಟ್, ಗ್ಲೌಸ್ ಅನ್ನು ಕೈಯಲ್ಲಿ ಹಿಡಿದುಕೊಂಡು ಕ್ರೀಸ್ಗೆ ಧಾವಿಸಿದರು.

ವೆಬ್ಸ್ಟರ್(59 ರನ್), ಉಸಾಮಾ ಮೀರ್ (0)ಔಟಾದರು. ಇನಿಂಗ್ಸ್ನ 5ನೇ ಎಸೆತದಲ್ಲಿ ಮಾರ್ಕ್ ಸ್ಟೆಕೆಟೀ(0) ರನೌಟಾದರು. ಹೀಗಾಗಿ ಸಿಡ್ನಿ ತಂಡ ಹ್ಯಾಟ್ರಿಕ್ ವಿಕೆಟ್ ಪಡೆಯಿತು. ಮೂರು ಎಸೆತಗಳಲ್ಲಿ ಮೂರು ವಿಕೆಟ್ಗಳು ಬಿದ್ದಾಗ ರವೂಫ್ ಕ್ರೀಸ್ಗೆ ಇಳಿದರು. ಅದೃಷ್ಟವಶಾತ್ 5ನೇ ಎಸೆತದಲ್ಲಿ ಸ್ಟೆಕೆಟೀ ರನೌಟಾದ ಕಾರಣ ರವೂಫ್ ನಾನ್ಸ್ಟ್ರೈಕ್ನಲ್ಲಿ ಉಳಿದುಕೊಂಡರು.

ರವೂಫ್ ಅಂತಿಮ ಎಸೆತಕ್ಕಿಂತ ಮೊದಲು ಹೆಲ್ಮೆಟ್, ಗ್ಲೌವ್ಸ್ಗಳನ್ನು ಧರಿಸಿಕೊಂಡರು. ಲಿಯಾಮ್ ಡೌಸನ್(2) ಕ್ಲೀನ್ಬೌಲ್ಡ್ ಆದ ಕಾರಣ ರವೂಫ್ ಒಂದೂ ಎಸೆತವನ್ನು ಎದುರಿಸಲಿಲ್ಲ. ಮೆಲ್ಬೋರ್ನ್ ಸ್ಟಾರ್ಸ್ ತಂಡ 20 ಓವರ್ಗಳಲ್ಲಿ 172 ರನ್ಗೆ ಆಲೌಟಾಯಿತು. ಸಿಡ್ನಿ ತಂಡ 18.2 ಓವರ್ಗಳಲ್ಲಿ ಗುರಿ ತಲುಪಿ 5 ವಿಕೆಟ್ ಅಂತರದಿಂದ ಜಯ ಸಾಧಿಸಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News