ಏಕದಿನ ಕ್ರಿಕೆಟ್ | ಹ್ಯಾಟ್ರಿಕ್ ವಿಕೆಟ್ ಪಡೆದ 7ನೇ ಬೌಲರ್ ಮಹೀಶ್ ತೀಕ್ಷಣ
Update: 2025-01-08 20:50 IST
ಮಹೀಶ್ ತೀಕ್ಷಣ | PC : X
ಹ್ಯಾಮಿಲ್ಟನ್: ಎರಡನೇ ಏಕದಿನ ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ಬುಧವಾರ ಶ್ರೀಲಂಕಾದ ಸ್ಪಿನ್ನರ್ ಮಹೀಶ್ ತೀಕ್ಷಣ ಅವರು ನ್ಯೂಝಿಲ್ಯಾಂಡ್ ತಂಡದ ವಿರುದ್ಧ ಹ್ಯಾಟ್ರಿಕ್ ವಿಕೆಟ್ ಪಡೆದು ಮಿಂಚಿದ್ದಾರೆ. ಆದರೆ ಈ ಪಂದ್ಯದಲ್ಲಿ ಲಂಕಾ ತಂಡ ಹೀನಾಯವಾಗಿ ಸೋತ ಕಾರಣ ಅವರ ಬೌಲಿಂಗ್ ಸಾಹಸ ವ್ಯರ್ಥವಾಯಿತು.
35ನೇ ಓವರ್‌ನ ಕೊನೆಯ ಎರಡು ಎಸೆತ ಹಾಗೂ 37ನೇ ಓವರ್‌ನ ಮೊದಲ ಎಸೆತದಲ್ಲಿ ಮಿಚೆಲ್ ಸ್ಯಾಂಟ್ನರ್, ನಾಥನ್ ಸ್ಮಿತ್ ಹಾಗೂ ಮ್ಯಾಟ್ ಹೆನ್ರಿ ವಿಕೆಟ್‌ಗಳನ್ನು ಪಡೆದ ಮಹೀಶ್ ಅವರು ಹ್ಯಾಟ್ರಿಕ್ ಪೂರೈಸಿದ ಶ್ರೀಲಂಕಾದ 7ನೇ ಬೌಲರ್ ಎನಿಸಿಕೊಂಡರು.
ಈ ಹಿಂದೆ ಚಾಮಿಂಡಾ ವಾಸ್, ಲಸಿತ್ ಮಾಲಿಂಗ, ದಿಲ್ಶನ್ ಮದುಶಂಕ, ತಿಸಾರ ಪೆರೇರ, ಫರ್ವೇಝ್ ಮಹಾರೂಫ್ ಹಾಗೂ ವನಿಂದು ಹಸರಂಗ ಶ್ರೀಲಂಕಾದ ಪರ ಸತತ 3 ಎಸೆತಗಳಲ್ಲಿ 3 ವಿಕೆಟ್‌ಗಳನ್ನು ಉರುಳಿಸಿದ್ದರು.