ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿ | ಭಾರತ ತಂಡಕ್ಕೆ ಗಿಲ್ ಬದಲು ಹೊಸ ನಾಯಕ!
Update: 2025-11-23 10:02 IST
PC: x.com/CricketNDTV
ಹೊಸದಿಲ್ಲಿ: ಕತ್ತು ನೋವಿನ ಕಾರಣದಿಂದಾಗಿ ಭಾರತ ಟೆಸ್ಟ್ ಮತ್ತು ಏಕದಿನ ತಂಡದ ನಾಯಕ ಶುಭ್ಮನ್ ಗಿಲ್, ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ಅಲಭ್ಯರಾಗಿರುವ ಹಿನ್ನೆಲೆಯಲ್ಲಿ ರಿಷಭ್ ಪಂತ್ ಟೆಸ್ಟ್ ತಂಡದ ನಾಯಕತ್ವ ವಹಿಸಿಕೊಂಡಿರುವ ನಡುವೆಯೇ ಏಕದಿನ ಸರಣಿಗೆ ನಾಯಕರನ್ನಾಗಿ ಕೆ.ಎಲ್.ರಾಹುಲ್ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಬಿಸಿಸಿಐ ಮೂಲಗಳು ಹೇಳಿವೆ.
ದಕ್ಷಿಣ ಆಫ್ರಿಕಾ ವಿರುದ್ಧದ ಕೊಲ್ಕತ್ತಾ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಕೇವಲ 3 ಎಸೆತ ಆಡಿದ ವೇಳೆ ಕತ್ತಿನ ಗಾಯ ಸಮಸ್ಯೆಯಿಂದ ಹೊರನಡೆದ ಗಿಲ್ ಅವರಿಗೆ ಪ್ರಸ್ತುತ ಮುಂಬೈನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗಿಲ್ ಸಂಪೂರ್ಣವಾಗಿ ಟೆಸ್ಟ್ ಆಡಲು ಫಿಟ್ ಆಗದ ಹಿನ್ನೆಲೆಯಲ್ಲಿ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮುಂಬೈಗೆ ಕರೆದೊಯ್ಯಲಾಗಿದೆ.