×
Ad

ಏಷ್ಯಾ ಕಪ್‌ನಲ್ಲಿ ಹಸ್ತಲಾಘವಕ್ಕೆ ಭಾರತದ ಆಟಗಾರರಿಂದ ನಿರಾಕರಣೆ; ಪಾಕಿಸ್ತಾನದಿಂದ ಎಸಿಸಿಗೆ ದೂರು

Update: 2025-09-15 13:43 IST

Photo credit: PTI

ದುಬೈ: ಏಷ್ಯಾ ಕಪ್‌ನಲ್ಲಿ ಭಾರತ-ಪಾಕಿಸ್ತಾನ ನಡುವಿನ ಪಂದ್ಯ ಬಳಿಕ ಉಂಟಾದ ಘಟನೆ ವಿವಾದಕ್ಕೆ ಕಾರಣವಾಗಿದೆ. ಭಾರತೀಯ ಆಟಗಾರರು ಹಸ್ತಲಾಘವ ಮಾಡಲು ನಿರಾಕರಿಸಿದ್ದ ಹಿನ್ನೆಲೆಯಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ಗೆ (ಎಸಿಸಿ) ಅಧಿಕೃತ ದೂರು ಸಲ್ಲಿಸಿದೆ.

ಸೂರ್ಯಕುಮಾರ್ ಯಾದವ್ ನೇತೃತ್ವದ ಭಾರತ ತಂಡವು ಏಳು ವಿಕೆಟ್‌ಗಳ ಜಯ ಗಳಿಸಿದ ನಂತರ ಈ ಘಟನೆ ನಡೆಯಿತು.

"ಭಾರತೀಯ ಆಟಗಾರರ ವರ್ತನೆ ಕ್ರೀಡಾಸ್ಫೂರ್ತಿಗೆ ವಿರುದ್ಧವಾಗಿದೆ" ಎಂದು ಪಿಸಿಬಿ ತನ್ನ ಹೇಳಿಕೆಯಲ್ಲಿ ಖಂಡಿಸಿದೆ. ಪ್ರತಿಕ್ರಿಯೆಯಾಗಿ ಪಾಕಿಸ್ತಾನ ನಾಯಕ ಸಲ್ಮಾನ್ ಅಲಿ ಅಘಾ ಪಂದ್ಯಾನಂತರದ ಕಾರ್ಯಕ್ರಮಕ್ಕೆ ಗೈರು ಹಾಜರಾದರು.

ಭಾರತ ಕ್ರಿಕೆಟ್ ತಂಡದ ನಾಯಕ ಸೂರ್ಯಕುಮಾರ್ ಯಾದವ್, ಪಹಲ್ಗಾಮ್ ಭಯೋತ್ಪಾದಕ ದಾಳಿಯ ಸಂತ್ರಸ್ತ ಕುಟುಂಬಗಳೊಂದಿಗೆ ಒಗ್ಗಟ್ಟು ಪ್ರದರ್ಶಿಸುವ ನಿಟ್ಟಿನಲ್ಲಿ ಹಸ್ತಲಾಘವ ಮಾಡದ ನಿರ್ಧಾರ ತೆಗೆದುಕೊಂಡಿದ್ದಾಗಿ ಹೇಳಿದರು.

"ಈ ಗೆಲುವನ್ನು ‘ಆಪರೇಷನ್ ಸಿಂಧೂರ್’ ನಡೆಸಿದ ನಮ್ಮ ಸಶಸ್ತ್ರ ಪಡೆಗಳಿಗೆ ಅರ್ಪಿಸುತ್ತೇವೆ. ಕೆಲವು ಸಂದರ್ಭಗಳಲ್ಲಿ ಕ್ರೀಡೆಗಿಂತ ದೊಡ್ಡ ಮೌಲ್ಯಗಳು ಇರುತ್ತವೆ" ಎಂದು ಅವರು ಸ್ಪಷ್ಟಪಡಿಸಿದರು.

ಟಾಸ್ ಸಂದರ್ಭದಲ್ಲಿಯೂ ಸೂರ್ಯಕುಮಾರ್ ತಮ್ಮ ಪಾಕಿಸ್ತಾನದ ಪ್ರತಿಸ್ಪರ್ಧಿಯೊಂದಿಗೆ ಕೈಕುಲುಕದೆ ದೂರ ಉಳಿದಿದ್ದರು. ಇದರಿಂದಲೇ ಪಂದ್ಯದ ಬಳಿಕ ಉದ್ವಿಗ್ನತೆ ಹೆಚ್ಚಿತು.

"ನಾವು ಕೈಕುಲುಕಲು ಬಯಸಿದ್ದೆವು, ಆದರೆ ಭಾರತ ತಂಡವು ನಿರಾಕರಿಸಿರುವುದರಿಂದ ನಿರಾಶೆಗೊಂಡೆವು" ಎಂದು ಪಾಕಿಸ್ತಾನ ಕೋಚ್ ಮೈಕ್ ಹೆಸ್ಸನ್ ಪ್ರತಿಕ್ರಿಯಿಸಿದರು.

ಭಾರತ-ಪಾಕಿಸ್ತಾನ ತಂಡಗಳು ಈ ಟೂರ್ನಿಯಲ್ಲಿ ಇನ್ನೂ ಎರಡು ಬಾರಿ ಮುಖಾಮುಖಿಯಾಗುವ ಸಾಧ್ಯತೆ ಇರುವುದರಿಂದ ವಿವಾದ ಮುಂದುವರಿಯುವ ಲಕ್ಷಣಗಳು ಗೋಚರಿಸುತ್ತಿವೆ ಎನ್ನಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News