×
Ad

ಆಸ್ಟ್ರೀಯನ್ ರೇಸ್ ವಾಕಿಂಗ್ ಚಾಂಪಿಯನ್‌ಶಿಪ್‌ : ಚಿನ್ನ ಗೆದ್ದ ಪ್ರಿಯಾಂಕಾ ಗೋಸ್ವಾಮಿ

Update: 2025-06-10 20:28 IST

 ಪ್ರಿಯಾಂಕಾ ಗೋಸ್ವಾಮಿ | pc : x \ @ddsportschannel

ಹೊಸದಿಲ್ಲಿ : ಆಸ್ಟ್ರೀಯನ್ ರೇಸ್ ವಾಕಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಮಹಿಳೆಯರ 10 ಕಿ.ಮೀ. ಸ್ಪರ್ಧೆಯಲ್ಲಿ ಅಗ್ರ ಸ್ಥಾನ ಪಡೆದಿರುವ ಭಾರತದ ರೇಸ್ ವಾಕರ್ ಪ್ರಿಯಾಂಕಾ ಗೋಸ್ವಾಮಿ ಈ ವರ್ಷ ಮೊದಲ ಚಿನ್ನದ ಪದಕ ತನ್ನದಾಗಿಸಿಕೊಂಡರು.

ಸೋಮವಾರ ನಡೆದ 10 ಕಿ.ಮೀ. ರೇಸ್ ವಾಕ್‌ನಲ್ಲಿ ಗೋಸ್ವಾಮಿ ಅವರು 47 ನಿಮಿಷ ಹಾಗೂ 54 ಸೆಕೆಂಡ್‌ನಲ್ಲಿ ಗುರಿ ತಲುಪಿ ಮೊದಲ ಸ್ಥಾನ ಪಡೆದರು. ತನ್ನ ನೆಚ್ಚಿನ ಸ್ಪರ್ಧೆ 20 ಕಿ.ಮೀ. ರೇಸ್ ವಾಕ್‌ನಲ್ಲಿ ಗೋಸ್ವಾಮಿ ರಾಷ್ಟ್ರೀಯ ದಾಖಲೆ(1:28.45)ನಿರ್ಮಿಸಿದ್ದಾರೆ.

ಗೋಸ್ವಾಮಿ 10 ಕಿ.ಮೀ. ಸ್ಪರ್ಧೆಯಲ್ಲಿ 2022ರಲ್ಲಿ 45 ನಿಮಿಷ, 47 ಸೆಕೆಂಡ್‌ನಲ್ಲಿ ಗುರಿ ತಲುಪಿ ವೈಯಕ್ತಿಕ ಶ್ರೇಷ್ಠ ಪ್ರದರ್ಶನ ನೀಡಿದ್ದರು.

‘‘ನನಗೆ ಒಂದು ನಿಮಿಷದ ಪೆನಾಲ್ಟಿ ವಿಧಿಸಿದ ನಂತರವೂ ಸ್ಪರ್ಧೆಯನ್ನು ಕೊನೆಗೊಳಿಸಿರುವೆ. ಪೆನಾಲ್ಟಿ ಹಾಗೂ ಜ್ವರದ ನಡುವೆ ಚಿನ್ನದ ಪದಕ ಗೆಲ್ಲುವುದು ಸುಲಭವಲ್ಲ’’ ಎಂದು 29ರ ಹರೆಯದ ಗೋಸ್ವಾಮಿ ತನ್ನ ಸಾಮಾಜಿಕ ಮಾಧ್ಯಮದಲ್ಲಿ ಬರೆದಿದ್ದಾರೆ.

ಗೋಸ್ವಾಮಿ ಅವರು ದೀರ್ಘ ಅಂತರದ ಸ್ಪರ್ಧೆಗಳಲ್ಲೂ ಭಾಗವಹಿಸಿದ್ದಾರೆ.

ಮೇನಲ್ಲಿ ಮೆಲ್ಬರ್ನ್‌ನಲ್ಲಿ ನಡೆದಿದ್ದ ಅತ್ಲೆಟಿಕ್ಸ್ ವಿಕ್ಟೋರಿಯ ವಾಕಿಂಗ್ ಚಾಂಪಿಯನ್‌ಶಿಪ್‌ನಲ್ಲಿ 2 ಗಂಟೆ, 26 ನಿಮಿಷ ಹಾಗೂ 54 ಸೆಕೆಂಡ್‌ನಲ್ಲಿ ಗುರಿ ತಲುಪಿ 2ನೇ ಸ್ಥಾನ ಪಡೆದಿದ್ದರು.

ಆಸ್ಟ್ರೀಯನ್ ಚಾಂಪಿಯನ್‌ಶಿಪ್‌ನಲ್ಲಿ ಪುರುಷರ 35 ಕಿ.ಮೀ. ರೇಸ್ ವಾಕ್ ಸ್ಪರ್ಧೆಯಲ್ಲಿ ಸಂದೀಪ್ ಕುಮಾರ್ 2:38:45 ಸೆಕೆಂಡ್‌ನಲ್ಲಿ ಗುರಿ ತಲುಪಿ 2ನೇ ಸ್ಥಾನ ಪಡೆದರು. ರಾಮ್ ಬಾಬೂ(2:41:47 ಸೆ.)3ನೇ ಸ್ಥಾನ ಪಡೆದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News