×
Ad

ಬಿಸಿಸಿಐ ಮಧ್ಯಂತರ ಅಧ್ಯಕ್ಷರಾಗಿ ರಾಜೀವ್ ಶುಕ್ಲಾ?

Update: 2025-06-02 21:48 IST

ರಾಜೀವ್ ಶುಕ್ಲಾ | PC : BCCI 

ಮುಂಬೈ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ರೋಜರ್ ಬಿನ್ನಿ ಮುಂದಿನ ತಿಂಗಳು 70ನೇ ವರ್ಷಕ್ಕೆ ಕಾಲಿಡುತ್ತಿದ್ದು, ಅವರ ಸ್ಥಾನವನ್ನು ಮೂರು ತಿಂಗಳ ಅವಧಿಗೆ ರಾಜೀವ್ ಶುಕ್ಲಾ ವಹಿಸಿಕೊಳ್ಳುವ ಸಾಧ್ಯತೆಯಿದೆ.

ಬಿಸಿಸಿಐ ಸಂವಿಧಾನದ ಪ್ರಕಾರ, ಅದರ ಪದಾಧಿಕಾರಿಯೊಬ್ಬರು 70 ವರ್ಷದ ಬಳಿಕ ತನ್ನ ಹುದ್ದೆಯಲ್ಲಿ ಮುಂದುವರಿಯುವಂತಿಲ್ಲ. ಹಾಗಾಗಿ, 1983ರ ವಿಶ್ವಕಪ್ ವಿಜೇತ ಭಾರತೀಯ ತಂಡದ ಸದಸ್ಯರಾಗಿರುವ ಬಿನ್ನಿ ಜುಲೈ 19ರ ಬಳಿಕ ಬಿಸಿಸಿಐ ಅಧ್ಯಕ್ಷ ಹುದ್ದೆಯಲ್ಲಿ ಮುಂದುವರಿಯುವಂತಿಲ್ಲ.

ಬಿಸಿಸಿಐ ಹಾಲಿ ಉಪಾಧ್ಯಕ್ಷ ಹಾಗೂ ಪ್ರಸಕ್ತ ಆಡಳಿದಲ್ಲಿ ಅತ್ಯಂತ ಹಿರಿಯ ಪದಾಧಿಕಾರಿಯಾಗಿರುವ ಶುಕ್ಲಾ, ನೂತನ ಮುಖ್ಯಸ್ಥರ ಆಯ್ಕೆಯಾಗುವವರೆಗೆ ಅಧ್ಯಕ್ಷರ ಹುದ್ದೆಯನ್ನು ನಿಭಾಯಿಸಲಿದ್ದಾರೆ.

ಶುಕ್ಲಾ 2020ರಿಂದ ಬಿಸಿಸಿಐ ಉಪಾಧ್ಯಕ್ಷ ಹುದ್ದೆಯಲ್ಲಿದ್ದಾರೆ. ಅವರು 2017ರವರೆಗೆ ಉತ್ತರಪ್ರದೇಶ ಕ್ರಿಕೆಟ್ ಅಸೋಸಿಯೇಶನ್ ಕಾರ್ಯದರ್ಶಿಯಾಗಿಯೂ ಕೆಲಸ ಮಾಡಿದ್ದರು. 2018ರವರೆಗೆ ಅವರು ಇಂಡಿಯನ್ ಪ್ರೀಮಿಯರ್ ಲೀಗ್‌ ನ ಅಧ್ಯಕ್ಷರಾಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News