×
Ad

ಇಂಗ್ಲೆಂಡ್‌ ವಿರುದ್ಧದ ಮೂರನೇ ಟೆಸ್ಟ್: ಮತ್ತೆ ತಂಡಕ್ಕೆ ಮರಳಿದ ಅಶ್ವಿನ್

Update: 2024-02-18 12:32 IST

ರವಿಚಂದ್ರನ್ ಅಶ್ವಿನ್ (Photo: PTI)

ರಾಜ್‍ಕೋಟ್: ಕುಟುಂಬದಲ್ಲಿ ತುರ್ತು ಆರೋಗ್ಯ ಸ್ಥಿತಿಯ ಕಾರಣದಿಂದ, ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಕ್ರಿಕೆಟ್ ಪಂದ್ಯದ ಮೂರನೇ ದಿನ ಪಂದ್ಯದಿಂದ ದೂರ ಉಳಿದಿದ್ದ ಸ್ಟಾರ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ನಾಲ್ಕನೇ ದಿನ ಮತ್ತೆ ತಂಡವನ್ನು ಸೇರಿಕೊಳ್ಳುವ ಮೂಲಕ ಭಾರತ ಕ್ರಿಕೆಟ್ ತಂಡಕ್ಕೆ ಹೆಚ್ಚಿನ ಬಲ ಬಂದಿದೆ.

ಅಶ್ವಿನ್ ಅವರು ತಂಡವನ್ನು ನಾಲ್ಕನೇ ದಿನ ಸೇರಿಕೊಳ್ಳುತ್ತಾರೆ ಎಂಬ ಅಂಶವನ್ನು ಬಿಸಿಸಿಐ ದೃಢಪಡಿಸಿತ್ತು. ಅಶ್ವಿನ್ ಅವರ ಅನುಪಸ್ಥಿತಿಯಲ್ಲೂ ಮೂರನೇ ದಿನ ಭಾರತದ ಬೌಲರ್‍ಗಳು ಅತ್ಯುತ್ತಮ ಪ್ರದರ್ಶನ ನೀಡಿ ಇಂಗ್ಲೆಂಡ್ ತಂಡವನ್ನು ಮೊದಲ ಇನಿಂಗ್ಸ್ ನಲ್ಲಿ 319 ರನ್‍ಗಳಿಗೆ ನಿಯಂತ್ರಿಸಿದ್ದರು. ಕೇವಲ ನಾಲ್ಕು ಬೌಲರ್ ಗಳ ಮೂಲಕ ಭಾರತ ತಂಡ ದಾಳಿ ನಡೆಸಿತ್ತು.

ನಾಲ್ಕನೇ ದಿನ ಭೋಜನ ವಿರಾಮದ ವೇಳೆಗೆ ಭಾರತ ಎರಡನೇ ಇನಿಂಗ್ಸ್‍ನಲ್ಲಿ 4 ವಿಕೆಟ್ ನಷ್ಟಕ್ಕೆ 314 ರನ್ ಗಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News