×
Ad

ಆರ್‌ಸಿಬಿ ಮಾರಾಟ ಮಾಡಲ್ಲ : ವದಂತಿ ಕುರಿತು ಸ್ಪಷ್ಟನೆ ನೀಡಿದ ಯುನೈಟೆಡ್ ಸ್ಪಿರಿಟ್ಸ್

Update: 2025-06-10 23:35 IST

Photo | NDTV

ಮುಂಬೈ: ಐಪಿಎಲ್ ಚಾಂಪಿಯನ್ಸ್ ಆಗಿ ಹೊರಹೊಮ್ಮಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಷೇರುಗಳನ್ನು ಡಿಯಾಜಿಯೊ(Diageo) ಮಾರಾಟ ಮಾಡಲು ಮುಂದಾಗಿದೆ ಎಂದು ಹೇಳಲಾಗಿತ್ತು. ಈ ವದಂತಿಗಳಿಗೆ ಯುನೈಟೆಡ್ ಸ್ಪಿರಿಟ್ಸ್ ಸ್ಪಷ್ಟನೆ ನೀಡಿದೆ.

ಆರ್‌ಸಿಬಿ ವಿಜಯೋತ್ಸವದ ವೇಳೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾಲ್ತುಳಿತ ಸಂಭವಿಸಿತ್ತು. ಘಟನೆ ಬಳಿಕ ಆರ್‌ಸಿಬಿ ಷೇರನ್ನು ಡಿಯಾಜಿಯೊ(Diageo) ಮಾರಾಟ ಮಾಡಲಿದೆ ಎಂಬ ವದಂತಿ ಹಬ್ಬಿತ್ತು.

ಈ ಬಗ್ಗೆ ಬಾಂಬೆ ಸ್ಟಾಕ್ ಎಕ್ಸ್ಚೆಂಜ್ (BSE)ಗೆ ಉತ್ತರಿಸಿರುವ ಯುನೈಟೆಡ್ ಸ್ಪಿರಿಟ್ಸ್, ಆರ್‌ಸಿಬಿ ತಂಡದ ಪಾಲು ಮಾರಾಟಕ್ಕೆ ಸಂಬಂಧಿಸಿದಂತೆ ಕೇಳಿಬರುತ್ತಿರುವ ಸುದ್ದಿಗಳು ಕೇವಲ ವದಂತಿಯಾಗಿದೆ. ಈ ರೀತಿಯ ಯಾವುದೇ ಚರ್ಚೆಗಳು ನಡೆದಿಲ್ಲ ಎಂದು ಸ್ಪಷ್ಟನೆ ನೀಡಿದೆ.

ಐಪಿಎಲ್ ಆರಂಭವಾದಾಗ ಐಪಿಎಲ್ ಫ್ರಾಂಚೈಸಿ ಆರ್‌ಸಿಬಿಯನ್ನು ವಿಜಯ್ ಮಲ್ಯ ಸ್ವಾಧೀನಪಡಿಸಿಕೊಂಡಿದ್ದರು. ಆದರೆ, ಅವರ ಕಿಂಗ್‌ಫಿಷರ್‌ ಏರ್‌ರ್ಲೈನ್ಸ್ ಲಿಮಿಟೆಡ್ ಸಾಲಗಾರರಿಗೆ ಹಣ ಪಾವತಿಸಲು ವಿಫಲವಾದ ನಂತರ 2012ರಲ್ಲಿ ಮುಚ್ಚಲ್ಪಟ್ಟಿತು. ಈ ವೇಳೆ ಯುನೈಟೆಡ್ ಸ್ಪಿರಿಟ್ಸ್‌ನಲ್ಲಿ ಕಡಿಮೆ ಪಾಲು ಹೊಂದಿದ್ದ ಡಿಯಾಜಿಯೋ ಇಡೀ ವ್ಯವಹಾರವನ್ನು ಖರೀದಿಸಿದ ಬಳಿಕ ಆರ್‌ಸಿಬಿಯ ಮಾಲಕತ್ವ ಕೂಡ ಬ್ರಿಟಿಷ್ ಮೂಲದ ಡಿಸ್ಟಿಲ್ಲರಿ ಕಂಪೆನಿಗೆ ಸೇರಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News