×
Ad

ಟೆಸ್ಟ್ ಕ್ರಿಕೆಟ್‌ ನಲ್ಲಿ 7ನೇ ಶತಕ | ಎಂ.ಎಸ್.ಧೋನಿ ದಾಖಲೆ ಪುಡಿಗಟ್ಟಿದ ರಿಷಭ್ ಪಂತ್

Update: 2025-06-21 20:30 IST

ಎಂ.ಎಸ್.ಧೋನಿ ,  ರಿಷಭ್ ಪಂತ್ | PTI 

ಲೀಡ್ಸ್: ಇಂಗ್ಲೆಂಡ್ ನೆಲದಲ್ಲಿ ತನ್ನ ಶ್ರೇಷ್ಠ ಪ್ರದರ್ಶನ ಮುಂದುವರಿಸಿದ ಭಾರತದ ಡೈನಾಮಿಕ್ ವಿಕೆಟ್‌ ಕೀಪರ್-ಬ್ಯಾಟರ್ ರಿಷಭ್ ಪಂತ್ ತನ್ನ 7ನೇ ಟೆಸ್ಟ್ ಶತಕದ ಮೂಲಕ ಹೆಡ್ಡಿಂಗ್ಲೆಯಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಮಿಂಚಿದ್ದಾರೆ.

ಇಂಗ್ಲೆಂಡ್ ವಿರುದ್ಧ ತನ್ನ 4ನೇ ಶತಕವನ್ನು ಸಿಡಿಸಿರುವ ಪಂತ್ ಆಧುನಿಕ ಕ್ರಿಕೆಟ್‌ ನಲ್ಲಿ ಭಾರತದ ಓರ್ವ ಶ್ರೇಷ್ಠ ಬ್ಯಾಟರ್ ಎಂಬುದನ್ನು ತೋರಿಸಿಕೊಟ್ಟರು. ಪಂತ್ ಅವರು 146 ಎಸೆತಗಳಲ್ಲಿ 10 ಬೌಂಡರಿ ಹಾಗೂ 4 ಸಿಕ್ಸರ್‌ಗಳ ನೆರವಿನಿಂದ ಮೂರಂಕೆಯನ್ನು ದಾಟಿದರು.

ಪಂತ್ ಅವರು ಇಂಗ್ಲೆಂಡ್ ನೆಲದಲ್ಲಿ 3ನೇ ಬಾರಿ ಶತಕ ಸಿಡಿಸಿ ಮಿಂಚಿದರು. ಈ ಹಿಂದೆ 2018ರಲ್ಲಿ ದಿ ಓವಲ್‌ನಲ್ಲಿ 114 ರನ್ ಹಾಗೂ 2022ರಲ್ಲಿ ಎಜ್‌ಬಾಸ್ಟನ್‌ನಲ್ಲಿ 146 ರನ್ ಗಳಿಸಿದ್ದರು.

2021ರಲ್ಲಿ ಅಹ್ಮದಾಬಾದ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಇನ್ನೊಂದು ಶತಕ ಗಳಿಸಿದ್ದರು. ಆಗ ಅವರು 101 ರನ್ ಸಿಡಿಸಿದ್ದರು.

ಪಂತ್ ಅವರು ಲೀಡ್ಸ್‌ನಲ್ಲಿ ಇಂದು ತನ್ನ ನಿಧಾನಗತಿಯ ಟೆಸ್ಟ್ ಶತಕ ದಾಖಲಿಸಿದರು. ತನ್ನ ಮೈಲಿಗಲ್ಲನ್ನು 146 ಎಸೆತಗಳನ್ನು ತಲುಪಿದರು. ಸ್ಫೋಟಕ ಶೈಲಿಯ ಎಡಗೈ ಬ್ಯಾಟರ್ ಪಂತ್ ವೃತ್ತಿಜೀವನದಲ್ಲಿ ಇದೇ ಮೊದಲ ಬಾರಿ ನಿಧಾನಗತಿಯ ಶತಕ ಬಾರಿಸಿದ್ದಾರೆ.

ಟೆಸ್ಟ್ ಕ್ರಿಕೆಟ್‌ ನಲ್ಲಿ ಗರಿಷ್ಠ ಶತಕಗಳನ್ನು ಗಳಿಸಿರುವ ಭಾರತೀಯ ವಿಕೆಟ್‌ ಕೀಪರ್ ಎನಿಸಿಕೊಂಡಿರುವ ಪಂತ್ ಅವರು ಎಂ.ಎಸ್. ಧೋನಿ ಅವರ ದಾಖಲೆಯನ್ನು ಮುರಿದರು. ಪಂತ್ ಇದೀಗ ನಿಯೋಜಿತ ವಿಕೆಟ್‌ ಕೀಪರ್ ಆಗಿ 7ನೇ ಟೆಸ್ಟ್ ಶತಕ ಗಳಿಸಿದರು. ಧೋನಿಯ ದಾಖಲೆ(6 ಶತಕ)ಮುರಿದರು. ವೃದ್ದಿಮಾನ್ ಸಹಾ 3 ಶತಕಗಳನ್ನು ಗಳಿಸಿದ್ದಾರೆ.

ಇಂಗ್ಲೆಂಡ್ ವಿರುದ್ಧ ಪಂತ್ ಶತಕಗಳ ಪಟ್ಟಿ:

ವರ್ಷ  ರನ್  ಎಸೆತ     ಸ್ಥಳ

2018  114    146      ದಿ ಓವಲ್

2021   101   118     ಅಹ್ಮದಾಬಾದ್

2022   146   111   ಬರ್ಮಿಂಗ್‌ಹ್ಯಾಮ್

2025   134   178   ಲೀಡ್ಸ್

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News