ಟೆಸ್ಟ್ ಕ್ರಿಕೆಟ್‌ನಲ್ಲಿ 150 ಕ್ಯಾಚ್‌ಗಳನ್ನು ಪಡೆದ ರಿಷಭ್ ಪಂತ್
ರಿಷಭ್ ಪಂತ್ | PC : PTI
ಲೀಡ್ಸ್: ಟೆಸ್ಟ್ ಕ್ರಿಕೆಟ್‌ನಲ್ಲಿ 150 ಕ್ಯಾಚ್‌ಗಳನ್ನು ಪೂರ್ಣಗೊಳಿಸಿದ ಭಾರತ ಕ್ರಿಕೆಟ್ ತಂಡದ ಮೂರನೇ ವಿಕೆಟ್‌ಕೀಪರ್ ಎನಿಸಿಕೊಂಡಿರುವ ರಿಷಭ್ ಪಂತ್ ತಮ್ಮ ಕಿರೀಟಕ್ಕೆ ಮತ್ತೊಂದು ಗರಿ ಸೇರಿಸಿಕೊಂಡಿದ್ದಾರೆ.
ಇಂಗ್ಲೆಂಡ್ ವಿರುದ್ಧ ಹೆಡ್ಡಿಂಗ್ಲೆಯಲ್ಲಿ ರವಿವಾರ ನಡೆದ ಮೊದಲ ಟೆಸ್ಟ್ ಪಂದ್ಯದ 3ನೇ ದಿನದಾಟದಲ್ಲಿ ಪಂತ್ ಈ ಮೈಲಿಗಲ್ಲು ತಲುಪಿದರು.
ಪ್ರಸಿದ್ಧ ಕೃಷ್ಣ ಬೌಲಿಂಗ್‌ನಲ್ಲಿ ಓಲಿ ಪೋಪ್ ನೀಡಿದ ಕ್ಯಾಚ್ ಪಡೆದ ಪಂತ್ ಈ ಸಾಧನೆ ಮಾಡಿದ್ದಾರೆ.
ಈ ಕ್ಯಾಚ್‌ನೊಂದಿಗೆ ಪಂತ್ ಅವರು ಸಯ್ಯದ್ ಕೀರ್ಮಾನಿ(160 ಕ್ಯಾಚ್‌ಗಳು) ಹಾಗೂ ಎಂ.ಎಸ್. ಧೋನಿ(256 ಕ್ಯಾಚ್‌ಗಳು)
ಅವರನ್ನೊಳಗೊಂಡ ಭಾರತೀಯ ವಿಕೆಟ್ ಕೀಪರ್‌ಗಳ ಎಲೈಟ್ ಕ್ಲಬ್ ಗೆ ಸೇರಿದರು.
ಪಂತ್ ಇದೀಗ ಟೆಸ್ಟ್ ಕ್ರಿಕೆಟ್‌ನಲ್ಲಿ 151 ಕ್ಯಾಚ್‌ಗಳು ಹಾಗೂ 15 ಸ್ಟಂಪಿಂಗ್‌ಗಳ ಮೂಲಕ ಒಟ್ಟು 166 ಬ್ಯಾಟರ್‌ಗಳನ್ನು ಔಟ್ ಮಾಡಿದ್ದು, ಭಾರತದ ಟೆಸ್ಟ್ ಇತಿಹಾಸದಲ್ಲಿ 3ನೇ ಶ್ರೇಷ್ಠ ಪ್ರದರ್ಶನ ನೀಡಿದ ವಿಕೆಟ್‌ಕೀಪರ್ ಆಗಿದ್ದಾರೆ.
27ರ ಹರೆಯದ ಪಂತ್ 2ನೇದಿನದಾಟದಲ್ಲಿ 134 ರನ್ ಗಳಿಸಿ ಅಬ್ಬರಿಸಿದ್ದರು.