×
Ad

ಇಂಗ್ಲೆಂಡ್ ಮಾಜಿ ಬ್ಯಾಟರ್ ರಾಬಿನ್ ಸ್ಮಿತ್ ನಿಧನ

Update: 2025-12-02 21:06 IST

ರಾಬಿನ್ ಸ್ಮಿತ್ | Photo Credit: Reuters

ಲಂಡನ್, ಡಿ.2: ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ಬ್ಯಾಟರ್ ರಾಬಿನ್ ಸ್ಮಿತ್ ತನ್ನ 62ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ ಎಂದು ಇಂಗ್ಲೀಷ್ ಕೌಂಟಿ ತಂಡ ಹ್ಯಾಂಪ್‌ ಶೈರ್ ಮಂಗಳವಾರ ಘೋಷಿಸಿದೆ.

ಸ್ಮಿತ್ 1988 ಹಾಗೂ 1996ರ ನಡುವೆ ಸ್ಮಿತ್ 62 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಆಸ್ಟ್ರೇಲಿಯದ ದಕ್ಷಿಣ ಪರ್ತ್‌ನಲ್ಲಿ ತನ್ನ ಕುಟುಂಬದೊಂದಿಗೆ ನೆಲೆಸಿದ್ದ ಸ್ಮಿತ್ ಸೋಮವಾರ ಸ್ವಗ್ರಹದಲ್ಲಿ ಹಠಾತ್ತನೆ ನಿಧನರಾಗಿದ್ದಾರೆ. ನಿಧನಕ್ಕೆ ಕಾರಣ ತಿಳಿದುಬಂದಿಲ್ಲ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಸ್ಮಿತ್ ಅವರು ಇತ್ತೀಚೆಗೆ ಕೋಚ್ ಆ್ಯಂಡ್ರೆ ಫ್ಲಿಟಾಂಫ್ ಆಹ್ವಾನದ ಮೇರೆಗೆ ಮೊದಲ ಆ್ಯಶಸ್ ಟೆಸ್ಟ್‌ಗಿಂತ ಮೊದಲು ಪರ್ತ್‌ ನಲ್ಲಿ ಇಂಗ್ಲೆಂಡ್‌ ಲಯನ್ಸ್ ತಂಡವನ್ನು ಭೇಟಿಯಾಗಿದ್ದರು. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News