×
Ad

ಏಶ್ಯಕಪ್ ಟ್ರೋಫಿಯೊಂದಿಗೆ ಸಲ್ಮಾನ್ ಅಲಿ, ಸೂರ್ಯಕುಮಾರ್ ಗೈರು

Update: 2025-09-28 20:43 IST

PC : PTI 

ದುಬೈ, ಸೆ.28: ಏಶ್ಯ ಕಪ್ ಟಿ-20 ಪಂದ್ಯಾವಳಿಯ ಫೈನಲ್ ಪಂದ್ಯಕ್ಕೆ ಮೊದಲು ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಸಲ್ಮಾನ್ ಅಲಿ ಅವರೊಬ್ಬರೇ ಟ್ರೋಫಿ ಜೊತೆ ಫೋಟೊಕ್ಕೆ ಪೋಸ್ ನೀಡಿದರು.

ಆದರೆ, ಭಾರತ ತಂಡದ ನಾಯಕ ಸೂರ್ಯ ಕುಮಾರ್ ಫೋಟೊಶೂಟ್‌ನಲ್ಲಿ ಭಾಗಿಯಾಗಲಿಲ್ಲ. ಈ ಮೂಲಕ ಟ್ರೋಫಿಯೊಂದಿಗೆ ಫೋಟೊ ತೆಗೆಯುವ ವಿಚಾರದಲ್ಲೂ ವಿವಾದ ಉಂಟಾಗಿದೆ.

ಮತ್ತೊಮ್ಮೆ ಟಾಸ್ ವೇಳೆ ಉಭಯ ನಾಯಕರು ಕೈಕುಲುಕಲಿಲ್ಲ. ಟಾಸ್ ಗೆದ್ದ ಸೂರ್ಯಕುಮಾರ್ ಪಾಕಿಸ್ತಾನ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು.

ಗಾಯಗೊಂಡಿರುವ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಮಹತ್ವದ ಪಂದ್ಯದಿಂದ ಹೊರಗುಳಿದಿದ್ದು, ಹರ್ಷಿತ್ ರಾಣಾ ಹಾಗೂ ಅರ್ಷದೀಪ್ ಸಿಂಗ್ ಆಡುವ 11ರ ಬಳಗದಿಂದ ಹೊರಗುಳಿದಿದ್ದಾರೆ. ರಿಂಕು ಸಿಂಗ್ ಹಾಗೂ ಶಿವಂ ದುಬೆ ವಾಪಸಾಗಿದ್ದಾರೆ.

ಪಾಕಿಸ್ತಾನ ತಂಡ ಆಡುವ 11ರ ಬಳಗದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News