ಶೂಟಿಂಗ್ ವಿಶ್ವಕಪ್: ಫೈನಲ್ ಗೆ ಭವತೇಗ್, ಮೈರಾಜ್
Update: 2025-07-08 21:37 IST
PC: sportstar.thehindu.com
ಲೊನಾಟೊ (ಇಟಲಿ): ಇಟಲಿಯ ಲೊನಾಟೊದಲ್ಲಿ ನಡೆಯುತ್ತಿರುವ ಐಎಸ್ಎಸ್ಎಫ್ ವಿಶ್ವಕಪ್ (ಶಾಟ್ಗನ್) ಪಂದ್ಯಾವಳಿಯ ಪುರುಷರ ಸ್ಕೀಟ್ ವಿಭಾಗದಲ್ಲಿ ಭವತೇಗ್ ಸಿಂಗ್ ಗಿಲ್ ಮತ್ತು ಮೈರಾಜ್ ಅಹ್ಮದ್ ಖಾನ್ ಫೈನಲ್ ತಲುಪಿದ್ದಾರೆ. 4 ಅರ್ಹತಾ ಸುತ್ತುಗಳ ಬಳಿಕ ಅವರಿಬ್ಬರೂ 98 ಅಂಕಗಳನ್ನು ಗಳಿಸಿದರು.
ಮಹಿಳೆಯರ ಸ್ಕೀಟ್ ವಿಭಾಗದಲ್ಲಿ ಗನೆಮತ್ ಸೆಖೋನ್ 96 ಅಂಕಗಳನ್ನು ಗಳಿಸಿ ಫೈನಲ್ ಹೋಗುವ ದಾರಿಯಲ್ಲಿ ಮುಂದುವರಿಯುತ್ತಿದ್ದಾರೆ.
ಟ್ರ್ಯಾಪ್ ಕೋನ್ಕವರ್ಡ್ ನಲ್ಲಿ ಸೋಮವಾರ ತನ್ನ ಅರ್ಹತಾ ಸುತ್ತುಗಳನ್ನು ಆರಂಭಿಸಿರುವ ಗನೆಮತ್ ಮಂಗಳವಾರ ನಡೆದ 2 ಸುತ್ತುಗಳಲ್ಲಿ ತಲಾ 1 ಗುರಿಯನ್ನು ತಪ್ಪಿಸಿಕೊಂಡು ಅಗ್ರಸ್ಥಾನಕ್ಕೇರಿದ್ದಾರೆ. ಆದರೆ ಅವರೀಗ ಇತರ ಐವರು ಸ್ಪರ್ಧಿಗಳೊಂದಿಗೆ ತಲಾ 96 ಅಂಕಗಳೊಂದಿಗೆ ಸಮಬಲದಲ್ಲಿದ್ದಾರೆ.