×
Ad

ಸತತ 2 ಎಸೆತಗಳಲ್ಲಿ 2 ವಿಕೆಟ್ ಉರುಳಿಸಿದ ಸಿರಾಜ್

Update: 2025-07-04 21:45 IST

ಮುಹಮ್ಮದ್ ಸಿರಾಜ್ | PC : PTI 

ಬರ್ಮಿಂಗ್‌ಹ್ಯಾಮ್ : ಬರ್ಮಿಂಗ್‌ಹ್ಯಾಮ್‌ನ ಎಜ್‌ಬಾಸ್ಟನ್‌ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ 2ನೇ ಪಂದ್ಯದ 3ನೇ ದಿನವಾದ ಶುಕ್ರವಾರ ಮುಹಮ್ಮದ್ ಸಿರಾಜ್ ಸತತ ಎರಡು ಎಸೆತಗಳಲ್ಲಿ 2 ವಿಕೆಟ್‌ಗಳನ್ನು ಉರುಳಿಸುವ ಮೂಲಕ ಇಂಗ್ಲೆಂಡ್‌ಗೆ ದೊಡ್ಡ ಹೊಡೆತ ನೀಡಿದರು. ಇದರಲ್ಲಿ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್‌ರ ಮಹತ್ವದ ವಿಕೆಟ್ ಸೇರಿದೆ. ಬೆನ್ ಸ್ಟೋಕ್ಸ್ ಶೂನ್ಯಕ್ಕೆ ವಾಪಸಾದರು.

ದಿನದ ತನ್ನ ಮೊದಲ ಓವರ್ ಬೌಲ್ ಮಾಡಿದ ಸಿರಾಜ್ ಮೊದಲು 22 ರನ್ ಗಳಿಸಿದ್ದ ಜೋ ರೂಟ್‌ರನ್ನು ಔಟ್ ಮಾಡಿದರು. ರೂಟ್, ಸಿರಾಜ್ ಎಸೆತವನ್ನು ವಿಕೆಟ್ ಹಿಂದುಗಡೆ ಕ್ಯಾಚ್ ರಿಷಭ್ ಪಂತ್‌ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.

ಮುಂದಿನ ಎಸೆತದಲ್ಲಿ ಸಿರಾಜ್ ನಾಯಕ ಬೆನ್ ಸ್ಟೋಕ್ಸ್‌ರನ್ನು ಶೂನ್ಯಕ್ಕೆ ವಾಪಸ್ ಕಳುಹಿಸಿದರು. ಆ ಕ್ಯಾಚನ್ನು ಕೂಡ ರಿಷಭ್ ಪಂತ್ ವಿಕೆಟ್ ಹಿಂದುಗಡೆ ಹಿಡಿದರು. ಆಗ ಸಿರಾಜ್‌ರ ಹರ್ಷಕ್ಕೆ ಪಾರವೇ ಇರಲಿಲ್ಲ. ಗಾಳಿಯಲ್ಲಿ ಮುಷ್ಠಿಯನ್ನು ಗುದ್ದುತ್ತಾ ಸಂಭ್ರಮಾಚರಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News