×
Ad

ಇದೇ ಮೊದಲ ಬಾರಿ ಮುಖ್ಯ ಕೋಚ್ ಹುದ್ದೆ ವಹಿಸಿಕೊಂಡ ಸೌರವ್ ಗಂಗುಲಿ

Update: 2025-08-24 21:56 IST

ಸೌರವ್ ಗಂಗುಲಿ | PC :  PTI 

ಹೊಸದಿಲ್ಲಿ, ಆ.24: ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗುಲಿ 2026ರ ಋತುವಿಗೆ ಎಸ್‌ಎ20 ಫ್ರಾಂಚೈಸಿ ಪ್ರಿಟೋರಿಯ ಕ್ಯಾಪಿಟಲ್ಸ್‌ ನ ಪ್ರಧಾನ ಕೋಚ್ ಆಗಿ ನೇಮಕಗೊಂಡಿದ್ದಾರೆ. ಇದೇ ಮೊದಲ ಬಾರಿ ಕ್ರಿಕೆಟ್ ತಂಡವೊಂದರ ಮುಖ್ಯ ಕೋಚ್ ಹುದ್ದೆ ವಹಿಸಿಕೊಳ್ಳಲಿದ್ದಾರೆ.

ದಕ್ಷಿಣ ಆಫ್ರಿಕಾದ ಸೆಂಚೂರಿಯನ್ ಮೂಲದ ಫ್ರಾಂಚೈಸಿ ಈ ವಿಚಾರವನ್ನು ರವಿವಾರ ದೃಢಪಡಿಸಿದೆ. ಜೋನಾಥನ್ ಟ್ರಾಟ್, ಕೋಚ್ ಹುದ್ದೆ ತ್ಯಜಿಸಿದ ಮರುದಿನ ಈ ಘೋಷಣೆ ಮಾಡಲಾಗಿದೆ.

‘‘ಪ್ರಿನ್ಸ್ , ಕ್ಯಾಪಿಟಲ್ಸ್ ಪಾಳಯಕ್ಕೆ ರಾಜವೈಭವ ತರಲು ಸಜ್ಜಾಗಿದ್ದಾರೆ. ಸೌರವ್ ಗಂಗುಲಿ ನಮ್ಮ ನೂತನ ಮುಖ್ಯ ಕೋಚ್ ಆಗಿದ್ದಾರೆ ಎಂದು ತಿಳಿಸಲು ಖುಷಿಯಾಗುತ್ತಿದೆ’’ ಎಂದು ಕ್ಯಾಪಿಟಲ್ಸ್ ಫ್ರಾಂಚೈಸಿ ರವಿವಾರ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದೆ.

2019ರಿಂದ 2022ರ ತನಕ ಬಿಸಿಸಿಐ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಗಂಗುಲಿ, ಈ ಹಿಂದೆ ಟೀಮ್ ಮ್ಯಾನೇಜ್‌ಮೆಂಟ್‌ನಲ್ಲಿ ಕೆಲಸ ಮಾಡಿದ್ದರು. ಆದರೆ ಮುಖ್ಯ ಕೋಚ್ ಆಗಿರಲಿಲ್ಲ. ಐಪಿಎಲ್‌ ನಲ್ಲಿ 2018 ಹಾಗೂ 2019ರ ಮಧ್ಯೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಿರ್ದೇಶಕರಾಗಿ ಕೆಲಸ ಮಾಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News