×
Ad

100 ಮೀ. ಫ್ರೀಸ್ಟೈಲ್ ನಲ್ಲಿ ‘ಶ್ರೇಷ್ಠ ಭಾರತೀಯ ದಾಖಲೆ’ ಸ್ಥಾಪಿಸಿದ ಶ್ರೀಹರಿ ನಟರಾಜ್

Update: 2025-07-21 00:03 IST

 Photo Credit: RITU RAJ KONWAR

ಬರ್ಲಿನ್, ಜು. 20: ಭಾರತೀಯ ಈಜುಪಟು ಶ್ರೀಹರಿ ನಟರಾಜ್ ತನ್ನ ದಾಖಲೆ ಮುರಿಯುವ ಅಭಿಯಾನವನ್ನು ಮುಂದುವರಿಸಿದ್ದಾರೆ. ಬರ್ಲಿನ್‌ ನಲ್ಲಿ ನಡೆಯುತ್ತಿರುವ ವಿಶ್ವ ವಿಶ್ವವಿದ್ಯಾನಿಲಯ ಗೇಮ್ಸ್ ನಲ್ಲಿ, 100 ಮೀಟರ್ ಫ್ರೀಸ್ಟೈಲ್ ನಲ್ಲಿ ಅವರು 49.46 ಸೆಕೆಂಡ್ ನಲ್ಲಿ ಗುರಿ ತಲುಪುವ ಮೂಲಕ ಸೆಮಿಫೈನಲ್ ಗೆ ಅರ್ಹತೆ ಪಡೆದಿದ್ದಾರೆ. ಅದೇ ವೇಳೆ, ಪುರುಷರ 100 ಮೀಟರ್ ಫ್ರೀಸ್ಟೈಲ್ ನಲ್ಲಿ ಭಾರತೀಯ ದಾಖಲೆಯನ್ನು ಮುರಿದಿದ್ದಾರೆ.

ಅವರು ಗ್ವಾಂಗ್ಝೂ ಏಶ್ಯನ್ ಗೇಮ್ಸ್ ಕಂಚಿನ ಪದಕ ವಿಜೇತ ವಿರ್ದವಾಲ್ ಖಡೆಯ ದೀರ್ಘಕಾಲೀನ 49.47 ಸೆಕೆಂಡ್ಗಳ ದಾಖಲೆಯನ್ನು ಹಿಂದಿಕ್ಕಿದ್ದಾರೆ. ವಿರ್ದವಾಲ ತನ್ನ ದಾಖಲೆಯನ್ನು 2008ರಲ್ಲಿ ನಿರ್ಮಿಸಿದ್ದರು.

ಶ್ರೀಹರಿ ಆರನೇ ಹೀಟ್ ನಲ್ಲಿ ಮೊದಲಿಗರಾಗಿ ಗುರಿ ತಲುಪಿದರು ಹಾಗೂ 12ನೇ ಸ್ಥಾನಿಗರಾಗಿ ಸೆಮಿಫೈನಲ್ ತಲುಪಿದರು.

ಶುಕ್ರವಾರ, 200 ಮೀಟರ್ ಫ್ರೀಸ್ಟೈಲ್ ಸ್ಪರ್ಧೆಯಲ್ಲಿ ತನ್ನದೇ ‘ಶ್ರೇಷ್ಠ ಭಾರತೀಯ ಸಮಯ’ವನ್ನು ಎರಡು ಬಾರಿ ಉತ್ತಮಪಡಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News