×
Ad

ಅಫ್ಘಾನಿಸ್ತಾನ ವಿರುದ್ಧ ಟಿ20 ಸರಣಿ : ಭಾರತಕ್ಕೆ ʼಸೂಪರ್ʼ ಜಯ

Update: 2024-01-17 23:24 IST

ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಟಿ20 ಸರಣಿಯ ಅಂತಿಮ ಪಂದ್ಯದಲ್ಲಿ ಸೂಪರ್‌ ಓವರ್‌ ಸೇರಿದಂತೆ ಎರಡು ಬಾರಿ ಪಂದ್ಯ ಟೈ ಆದ ರೋಚಕ ಕ್ಷಣ ನಡೆಯಿತು. ಅಂತಿಮವಾಗಿ ಎರಡನೇ ಸೂಪರ್‌ ಓವರ್ ನಲ್ಲಿ ಭಾರತ ತಂಡವು ಜಯಭೇರಿಯಾಯಿತು. ಆ ಮೂಲಕ ಅಫ್ಘಾನಿಸ್ತಾನ ವಿರುದ್ಧದ ಸರಣಿಯನ್ನು 3-0 ಅಂಕಗಳಿಂದ ಭಾರತ ತಂಡ ಕ್ಲೀನ್‌ ಸ್ವೀಪ್‌ ಮಾಡಿತು.

ಅಫ್ಘಾನ್‌ ವಿರುದ್ದ ಟಾಸ್‌ ಗೆದ್ದ ಭಾರತ ತಂಡ ಬ್ಯಾಟಿಂಗ್‌ ಅಯ್ದುಕೊಂಡಿತು. ಆರಂಭಿಕ ವಿಕೆಟ್‌ ಗಳ ಶೀಘ್ರ ಪತನದ ಹೊರತಾಗಿಯೂ ನಾಯಕ ರೋಹಿತ್‌ ಶರ್ಮಾ ಆಕರ್ಷಕ ಶತಕ ಹಾಗೂ ರಿಂಕು ಸಿಂಗ್‌ 69 ರನ್‌ ಗಳ ನೆರವಿನಿಂದ 212 ರನ್‌ ಪೇರಿಸಿತು.

ಈ ಕಠಿಣ ಗುರಿ ಬೆನ್ನತ್ತಿದ ಅಫ್ಘಾನ್‌ ಸಂಘಟಿತ ಬ್ಯಾಟಿಂಗ್‌ ಪ್ರದರ್ಶಿಸಿತು. ಗುರ್ಭಾಝ್‌, ಝರ್ದಾನ್‌ ಹಾಗೂ ಗುಲ್ಬುದ್ದೀನ್ ಅರ್ಧಶತಕದ ನೆರವಿಂದ ನಿಗದಿತ 20 ಓವರ್‌ ಗಳಲ್ಲಿ ಪಂದ್ಯ ಟೈ ಆಯಿತು. ಕಡೇ ಓವರ್‌ ನಲ್ಲಿ19 ರನ್‌ ಬೇಕಿದ್ದಾಗ ಬ್ಯಾಟ್‌ ಬೀಸಿದ ಗುಲ್ಬುದ್ದೀನ್ ಹಾಗೂ ಅಶ್ರಫ್‌ ಜೋಡಿ 18 ರನ್‌ ಜೋಡಿಸಿ ಪಂದ್ಯವನ್ನು ಟೈ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News