×
Ad

5ನೇ ಯೂತ್ ಏಕದಿನ ಪಂದ್ಯ: ಇಂಗ್ಲೆಂಡ್ ಗೆ ಜಯ ಸರಣಿ ಗೆದ್ದ ಭಾರತದ ಅಂಡರ್-19 ಕ್ರಿಕೆಟ್ ತಂಡ

Update: 2025-07-08 21:44 IST

PC : NDTV 

ಲಂಡನ್: ಆರಂಭಿಕ ಬ್ಯಾಟರ್ ಬೆನ್ ಡಾಕಿನ್ಸ್ ಹಾಗೂ 3ನೇ ಕ್ರಮಾಂಕದ ಆಟಗಾರ ಬೆನ್ ಮೆಯಸ್ ಅವರ ಅರ್ಧಶತಕದ ಸಹಾಯದಿಂದ ಇಂಗ್ಲೆಂಡ್ ಅಂಡರ್-19 ತಂಡವು ಭಾರತದ ಅಂಡರ್-19 ಕ್ರಿಕೆಟ್ ತಂಡವನ್ನು ಸೋಮವಾರ ನಡೆದ ಐದನೇ ಹಾಗೂ ಅಂತಿಮ ಯೂತ್ ಏಕದಿನ ಪಂದ್ಯದಲ್ಲಿ 7 ವಿಕೆಟ್ ಗಳ ಅಂತರದಿಂದ ಮಣಿಸಿದೆ. ಸೋಲಿನ ಹೊರತಾಗಿಯೂ ಭಾರತ ತಂಡವು 5 ಪಂದ್ಯಗಳ ಸರಣಿಯನ್ನು 3-2 ಅಂತರದಿಂದ ಗೆದ್ದುಕೊಂಡಿದೆ.

ಗೆಲ್ಲಲು 211 ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡಕ್ಕೆ ಡಾಕಿನ್ಸ್(66 ರನ್)ಹಾಗೂ ಮಯೆಸ್(ಔಟಾಗದೆ 82) ಉತ್ತಮ ಅಡಿಪಾಯ ಹಾಕಿಕೊಟ್ಟರು. ಥಾಮಸ್ ರೀವ್(ಔಟಾಗದೆ 49,37 ಎಸೆತ)18 ಓವರ್ಗಳು ಬಾಕಿ ಇರುವಾಗಲೇ 3 ವಿಕೆಟ್ ಗಳ ನಷ್ಟಕ್ಕೆ ತಂಡವನ್ನು ಗೆಲುವಿನ ದಡ ಸೇರಿಸಿದರು.

ಭಾರತದ ಪರ ನಮನ್ ಪುಷ್ಪಕ್(2-65) ಹಾಗೂ ದೀಪೇಶ್ ದೇವೇಂದ್ರನ್(1-34) ಮೂರು ವಿಕೆಟ್ ಉರುಳಿಸಿದ್ದರೂ ರನ್ ಚೇಸ್ ವೇಳೆ ಇಂಗ್ಲೆಂಡ್ ತಂಡ ಎಲ್ಲಿಯೂ ಹಿಡಿತ ತಪ್ಪಲಿಲ್ಲ. 31.1 ಓವರ್ಗಳಲ್ಲಿ 211 ರನ್ ಗಳಿಸಿತು.

ಇದಕ್ಕೂ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದ ಭಾರತ ತಂಡವು ನಾಯಕ ಆಯುಷ್ ಮ್ಹಾತ್ರೆ(1 ರನ್)ಅವರ ವಿಕೆಟನ್ನು ಬೇಗನೆ ಕಳೆದುಕೊಂಡಿತು. 4ನೇ ಪಂದ್ಯದಲ್ಲಿ 52 ಎಸೆತಗಳಲ್ಲಿ ಶತಕ ಗಳಿಸಿದ್ದ ವೈಭವ್ ಸೂರ್ಯವಂಶಿ 42 ಎಸೆತಗಳಲ್ಲಿ 33 ರನ್ ಗಳಿಸಿದರು. ಆರ್.ಎಸ್. ಅಂಬರೀಶ್ ಗರಿಷ್ಠ ಸ್ಕೋರ್(ಔಟಾಗದೆ 66)ಗಳಿಸಿದರು. ಇಂಗ್ಲೆಂಡ್ ಬೌಲರ್ಗಳು ನಿಗದಿತ 50 ಓವರ್ಗಳಲ್ಲಿ ಭಾರತ ತಂಡವನ್ನು 9 ವಿಕೆಟ್ ಗಳ ನಷ್ಟಕ್ಕೆ 210 ರನ್ಗೆ ನಿಯಂತ್ರಿಸಿದರು.

ಉಭಯ ತಂಡಗಳು ಜುಲೈ 12ರಿಂದ ಬೆಕೆನ್ಹ್ಯಾಮ್ ನಲ್ಲಿ 2 ಪಂದ್ಯಗಳ ಯೂತ್ ಟೆಸ್ಟ್ ಸರಣಿಯನ್ನು ಆಡಲಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News