×
Ad

ವಿಶ್ವಕಪ್‌ ಗೆದ್ದ ಬೆನ್ನಲ್ಲೇ‌ ಅಂತರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ವಿರಾಟ್ ಕೊಹ್ಲಿ

Update: 2024-06-30 00:05 IST

Photo : x/@T20WorldCup

ಬ್ರಿಡ್ಜ್ ಟೌನ್ : ಇಲ್ಲಿನ ಕೆನ್ಸಿಂಗ್ಟನ್ ಓವಲ್ ಸ್ಟೇಡಿಯಂನಲ್ಲಿ ನಡೆದ ಟಿ20 ವಿಶ್ವಕಪ್ ನ ಫೈನಲ್ ಪಂದ್ಯದಲ್ಲಿ ಭಾರತ ತಂಡವು ದಕ್ಷಿಣ ಆಫ್ರಿಕಾವನ್ನು ಸೋಲಿಸಿ 17 ವರ್ಷಗಳ ಬಳಿಕ ಟಿ20 ವಿಶ್ವಕಪ್‌ ಗೆ ಮುತ್ತಿಟ್ಟಿದೆ.

ಪಂದ್ಯದ ಬಳಿಕ ʼಮ್ಯಾನ್‌ ಆಫ್‌ ದಿ ಮ್ಯಾಚ್‌ʼ ಪ್ರಶಸ್ತಿ ಪಡೆದು ಮಾತನಾಡಿದ ಭಾರತ ತಂಡದ ಸ್ಟಾರ್ ಬ್ಯಾಟರ್‌ ವಿರಾಟ್‌ ಕೊಹ್ಲಿ ತಮ್ಮ ಅಂತರಾಷ್ಟ್ರೀಯ ಟಿ20 ಕ್ರಿಕಟ್‌ ಗೆ ನಿವೃತ್ತಿ ಘೋಷಿಸಿದ್ದಾರೆ.

ಪಂದ್ಯದ ಬಳಿಕ ಮಾತನಾಡಿದ ವಿರಾಟ್ ಕೊಹ್ಲಿ, ನಾವು ಸಾಧಿಸಲು ಬಯಸಿದ್ದು ಇದನ್ನೇ. ಭಾರತಕ್ಕಾಗಿ ಇದು ನನ್ನ ಕೊನೆಯ ಟಿ20 ಕ್ರಿಕೆಟ್ ಪಂದ್ಯವಾಗಿತ್ತು. ವಿಶ್ವಕಪ್ ಎತ್ತುವ ಅವಕಾಶ ಸಿಕ್ಕಿದೆ. ಪಂದ್ಯ ಸೋತರೆ ಮಾತ್ರವಲ್ಲ, ಗೆದ್ದರೂ ನನ್ನ ನಿವೃತ್ತಿ ಘೋಷಣೆ ನಿರ್ಧಾರ ಮಾಡಿ ಆಗಿತ್ತು. ಇದು ಎಲ್ಲರಿಗೂ ತಿಳಿದಿದ್ದ ವಿಚಾರ ಎಂದು ಹೇಳಿದ್ದಾರೆ.  

ಕಳೆದ ಕೆಲವು ಪಂದ್ಯಗಳಲ್ಲಿ ನನ್ನ ಆತ್ಮವಿಶ್ವಾಸ ಅಷ್ಟೊಂದು ಚೆನ್ನಾಗಿರಲಿಲ್ಲ. ಅದು ನನ್ನ ಆಟದ ಮೇಲೂ ಪರಿಣಾಮ ಬೀರಿತ್ತು. ಆದರೆ ದೇವರು ಯಾವಾಗ ಏನು ಕೊಡಬೇಕು, ಅದನ್ನು ಕೊಡುತ್ತಾನೆ. ಇಂದಿನ ಪಂದ್ಯದಲ್ಲಿ ನನಗೆ ದೇವರ ಆಶಿರ್ವಾದ ಸಿಕ್ಕಿದೆ. ಅದಕ್ಕೆ ನಾನು ಆಭಾರಿಯಾಗಿದ್ದೇನೆ. ದೇವರಿಗೆ ನಾನು ತಲೆಬಾಗುತ್ತೇನೆ ಎಂದು ವಿರಾಟ್‌ ಕೊಹ್ಲಿ ಹೇಳಿದರು. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News