ಹೆಚ್ಚು ಲಭ್ಯವಿರುವವರು ನಮಗೆ ಬೇಕಿತ್ತು : ಸೂರ್ಯ ಕುಮಾರ್ ಯಾದವ್ ಆಯ್ಕೆ ಕುರಿತು ಅಗರ್ಕರ್
Update: 2024-07-22 12:30 IST
Photo : deccanherald.com
ಮುಂಬೈ: ಭಾರತದ ಟಿ20 ತಂಡದ ನಾಯಕನಾಗಿ ಹಾರ್ದಿಕ್ ಪಾಂಡ್ಯ ಬದಲು ಸೂರ್ಯಕುಮಾರ್ ಯಾದವ್ ಅವರನ್ನು ನೇಮಕ ಮಾಡಿದ ಹಿಂದಿನ ಕಾರಣವನ್ನು ವಿವರಿಸಿದ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್, ಫಿಟ್ನೆಡ್, ಡ್ರೆಸ್ಸಿಂಗ್ ರೂಮ್‌ನಿಂದ ಬಂದ ಪ್ರತಿಕ್ರಿಯೆಗಳು ಮತ್ತು ಸ್ಥಿರ ಲಭ್ಯತೆಯು ಯಾದವ್ ಅವರ ಆಯ್ಕೆಗೆ ಕಾರಣವಾಯಿತು ಎಂದಿದ್ದಾರೆ.
ಭಾರತದ ಶ್ರೀಲಂಕಾ ಪ್ರವಾಸಕ್ಕಿಂತ ಮುನ್ನ ಮುಖ್ಯ ಕೋಚ್ ಗೌತಮ್ ಗಂಭೀರ್ ಜೊತೆ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು “ಫಿಟ್ನೆಸ್ ದೊಡ್ಡ ಸವಾಲಾಗಿತ್ತು ಮತ್ತು ಹೆಚ್ಚು ಲಭ್ಯವಿರುವ ಯಾರಾದರೂ ನಮಗೆ ಬೇಕಿತ್ತು” ಎಂದು ಹೇಳಿದರು.
“ಅವರು ಟಿ20 ಅತ್ಯುತ್ತಮ ಬ್ಯಾಟ್ಸ್‌ಮೆನ್‌ಗಳಲ್ಲಿ ಒಬ್ಬರು. ಅವರು ಎಲ್ಲಾ ಪಂದ್ಯಗಳನ್ನು ಆಡುವ ಸಾಧ್ಯತೆ ಹೆಚ್ಚು. ಅವರು ಅರ್ಹ ಕಪ್ತಾನ, ಅವರು ಈ ಪಾತ್ರಕ್ಕೆ ಹೇಗೆ ಹೊಂದಿಕೊಳ್ಳುತ್ತಾರೆಂದು ನೋಡಬೇಕು,” ಎಂದು ಅಗರ್ಕರ್ ಹೇಳಿದರು.