×
Ad

ವಿಂಬಲ್ಡನ್ ಚಾಂಪಿಯನ್‌ ಶಿಪ್ | ಟೇಲರ್ ಫ್ರಿಟ್ಝ್ ಅಂತಿಮ-16ರ ಸುತ್ತಿಗೆ ಲಗ್ಗೆ

Update: 2025-07-05 23:27 IST

Photo Credit: AP

ಲಂಡನ್: ಸ್ಪೇನ್ ಆಟಗಾರ ಅಲೆಜಾಂಡ್ರೊ ಡೇವಿಡೋವಿಚ್ ಫೊಕಿನಾರ ಹೋರಾಟವನ್ನು ಹಿಮ್ಮೆಟ್ಟಿಸಿದ ಅಮೆರಿಕದ ಆಟಗಾರ ಟೇಲರ್ ಫ್ರಿಟ್ಝ್ ವಿಂಬಲ್ಡನ್ ಟೆನಿಸ್ ಚಾಂಪಿಯನ್‌ ಶಿಪ್‌ ನಲ್ಲಿ ಅಂತಿಮ-16ರ ಸುತ್ತು ತಲುಪಿದರು.

ಶುಕ್ರವಾರ ನಡೆದ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ವಿಶ್ವದ ನಂ.5ನೇ ಆಟಗಾರ ಫ್ರಿಟ್ಝ್ ಅವರು ಫೊಕಿನಾ ಅವರನ್ನು 6-4, 6-3, 6-7(5), 6-1 ಸೆಟ್‌ ಗಳ ಅಂತರದಿಂದ ಮಣಿಸಿದರು.

ಟೇಲರ್ ಫ್ರಿಟ್ಝ್ ಅವರು 2003ರ ನಂತರ ಪುರುಷರ ಗ್ರ್ಯಾನ್ಸ್ಲಾಮ್ ಪ್ರಶಸ್ತಿ ಗೆದ್ದ ಅಮೆರಿಕದ ಮೊದಲ ಆಟಗಾರನಾಗುವ ವಿಶ್ವಾಸದಲ್ಲಿದ್ದಾರೆ. 22 ವರ್ಷಗಳ ಹಿಂದೆ ಆಂಡಿ ರಾಡಿಕ್ ಈ ಸಾಧನೆ ಮಾಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News