×
Ad

ಚನ್ನರಾಯಪಟ್ಟಣ | ಸುಟ್ಟು ಕರಕಲಾದ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ

Update: 2025-08-28 19:25 IST

ಚನ್ನರಾಯಪಟ್ಟಣ : ತಾಲ್ಲೂಕಿನ ಶ್ರವಣಬೆಳಗೊಳದ ಹೊರವಲಯದ ಜಿನ್ನಾಥಪುರ ರಸ್ತೆಯಲ್ಲಿರುವ ಸ್ಮಶಾನದಲ್ಲಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹವೊಂದು ಪತ್ತೆಯಾಗಿದ್ದು, ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ.

ದುಷ್ಕರ್ಮಿಗಳು ಬೇರೆಡೆ ವ್ಯಕ್ತಿಯನ್ನು ಹತ್ಯೆಗೈದು  ಸುಡಲು ಯತ್ನಿಸಿದ್ದು, ಉಳಿದ ಅಸ್ತಿಯನ್ನು ಗೊಬ್ಬರದ ಚೀಲದಲ್ಲಿ ತುಂಬಿಕೊಂಡು ಇಲ್ಲಿಯ ಸ್ಮಶಾನಕ್ಕೆ ತಂದು ಎಸೆಯಲಾಗಿದೆ ಎನ್ನಲಾಗಿದೆ.

ಗುರುವಾರ ಬೆಳಗ್ಗೆ ದನ ಮೇಯಿಸಲು ಬಂದ ವ್ಯಕ್ತಿ ಸುಟ್ಟು ಕರಕಲಾದ ಮೃತ ದೇಹವನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಜಿಲ್ಲಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮದ್ ಸುಜೀತ, ಅಪರ ಪೊಲೀಸ್ ವರಿಷ್ಠಾಧಿಕಾರಿ ತಮ್ಮಯ್ಯ, ಸರ್ಕಲ್ ಇನ್ಸೆಕ್ಟರ್ ಸಂತೋಷ್, ಪಿಎಸ್‌ಐ ನವೀನ್‌ ಹಾಗ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲಿಸಿದರು.

ತಾಲ್ಲೂಕಿನ ಶ್ರವಣಬೆಳಗೊಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News