ಅಂದರ್ ಬಾಹರ್ ಇಸ್ಪೀಟು ಜುಗಾರಿ: 11 ಮಂದಿ ಬಂಧನ
ಬ್ರಹ್ಮಾವರ, ಸೆ.4: ಹೇರಾಡಿ ಗ್ರಾಮದ ರಶ್ಮಿ ಬಾರ್ ಆ್ಯಂಡ್ ಲಾಡ್ಜ್ ಕಟ್ಟಡದ 2ನೇ ಮಹಡಿಯ ರೂಮ್‌ನಲ್ಲಿ ಸೆ.3ರಂದು ಸಂಜೆ ವೇಳೆ ಅಂದರ್ ಬಾಹರ್ ಇಸ್ಪೀಟು ಜುಗಾರಿ ಆಡುತ್ತಿದ್ದ 11 ಮಂದಿ ಆರೋಪಿಗಳನ್ನು ಬ್ರಹ್ಮಾವರ ಪೊಲೀಸರು ಬಂಧಿಸಿದ್ದಾರೆ.
ಭಟ್ಕಳದ ವಿಶ್ವನಾಥ ಪೂಜಾರಿ(43), ಬ್ರಹ್ಮಾವರ ಶಿರಿಯಾರ ಕುದ್ರೆಕಟ್ಟೆಯ ಗಣೇಶ್ ಪೂಜಾರಿ(30), ವಾರಂಬಳ್ಳಿ ಇಂದಿರಾನಗರದ ಕೇಶವ(57), ಬಸ್ರೂರಿನ ಪ್ರಭಾಕರ ಶೆಟ್ಟಿ(49), ಕೋಟೇಶ್ವರ ಹಳವಳ್ಳಿಯ ಜಯರಾಜ್(40), ಪಾರಂಪಳ್ಳಿಯ ರಾಜು ಪೂಜಾರಿ(59), ಹೆಸ್ಕೂತ್ತೂರಿನ ರಾಜೀವ್ ಶೆಟ್ಟಿ(49), ಕಾರ್ಕಡದ ರತ್ನಾಕರ(53), ಪ್ರಶಾಂತ್(38), ಕೋಟತಟ್ಟು ಪಡುಕೆರೆಯ ಹರೀಶ್ ಮೊಗವೀರ(40), ಸಿದ್ದಾಪುರ ನಿಡಗೋಡುವಿನ ಲೋಹಿತ್ ಕುಪ್ಪಸ್ವಾಮಿ ಭೋವಿ(38) ಬಂಧಿತ ಆರೋಪಿಗಳು.
ಬಂಧಿತರಿಂದ ಒಟ್ಟು 21080ರೂ. ನಗದು, 12 ಮೊಬೈಲ್ ಪೋನ್‌ಗಳು, ಎರಡು ದ್ವಿಚಕ್ರ ವಾಹನ, ಒಂದು ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬ್ರಹ್ಮಾವರ ಪೊಲೀಸ್ ಉಪನಿರೀಕ್ಷಕ ಅಶೋಕ್ ಮಾಳಾಬಗಿ ನೇತೃತ್ವದಲ್ಲಿ ಈ ಕಾರ್ಯಾಚರಣೆ ಮಾಡಲಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ