ಯುಪಿಎಸ್‌ಸಿಯಲ್ಲಿ 739ನೇ ರ‍್ಯಾಂಕ್ ಪಡೆದ ಬೈಂದೂರು ಮೂಲದ ಇಂದ್ರಾಚಿತ
ಕುಂದಾಪುರ: ಹೈದರಾಬಾದ್‌ನಲ್ಲಿ ನೆಲೆಸಿರುವ, ಮೂಲತಃ ಬೈಂದೂರು ತಾಲೂಕಿನ ಕಾಲ್ತೋಡು ಬೋಳಂಬಳ್ಳಿಯ ಇಂದ್ರಾಚಿತ ಅವರಿಗೆ ಯುಪಿಎಸ್‌ಸಿ ಪರೀಕ್ಷೆಯಲ್ಲಿ 739ನೆ ರ‍್ಯಾಂಕ್ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ.
ಚಿತ್ತೂರು ಮಾರಣಕಟ್ಟೆ ಶ್ರೀಬ್ರಹ್ಮಲಿಂಗೇಶ್ವರ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಸದಾಶಿವ ಶೆಟ್ಟಿ ಅವರ ಮೊಮ್ಮಗಳಾದ ಈಕೆ, ಮೂಲತಃ ಕಾಲ್ತೋಡಿನ ಬೋಳಂಬಳ್ಳಿಯ ಮಮತಾ ಹಾಗೂ ಕಾಲ್ತೋಡು ಗ್ರಾಮದ ನಿವಾಸಿ, ಹೈದರಾಬಾದ್‌ನಲ್ಲಿ ಹೋಟೆಲ್ ಉದ್ಯಮಿ ಅಲ್ಸಾಡಿ ರಾಘವೇಂದ್ರ ಶೆಟ್ಟಿ ಅವರ ಪುತ್ರಿ. ಇಂದ್ರಾಚಿತ ಹೈದರಾಬಾದಿನ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡಿದ್ದು ಪೊಲಿಟಿಕಲ್ ಸೈನ್ಸ್ ವಿಷಯದಲ್ಲಿ ಎಂಎ ಪದವಿ ಪಡೆದಿದ್ದಾರೆ. ದಿಲ್ಲಿಯಲ್ಲಿ ಯುಪಿಎಸ್‌ಸಿ ಪರೀಕ್ಷೆಗೆ ತರಬೇತಿ ಪಡೆದಿದ್ದರು.
ಆಡಳಿತಾತ್ಮಕ ಸೇವೆಗಾಗಿ ಐಎಎಸ್ ಮಾಡುವ ಕನಸಿತ್ತು. ಉನ್ನತ ರ್ಯಾಂಕ್ ಬರುವ ನಿರೀಕ್ಷೆ ಇತ್ತು. ಈಗ ಬಂದ ರ್ಯಾಂಕ್ ಪ್ರಕಾರ ಐಆರ್‌ಎಸ್ ಅಥವಾ ಐಎಫ್‌ಎಸ್‌ನಲ್ಲಿ ಅವಕಾಶ ದೊರೆಯುವ ಸಾಧ್ಯತೆಯಿದೆ ಎಂದು ಇಂದ್ರಾಚಿತ ಪ್ರತಿಕ್ರಿಯೆ ನೀಡಿದ್ದಾರೆ.