×
Ad

ಜ.22ರಿಂದ ಸಾಂಝಿ ಪೇಪರ್ ಕಲಾಕೃತಿ ಪ್ರದರ್ಶನ

Update: 2025-01-20 20:38 IST

ಉಡುಪಿ, ಜ.20:ಭಾವನಾ ಫೌಂಡೇಶನ್ ಹಾವಂಜೆ ಹಾಗೂ ಬಾಸ ಗ್ಯಾಲರಿ ಮತ್ತು ಸ್ಟುಡಿಯೋ ಉಡುಪಿಯ ಮಧುರಂ ವೈಟ್ ಲೋಟಸ್ ಹೋಟೇಲ್‌ನ ಸಹಯೋಗದಲ್ಲಿ ಬೃಂದಾವನದಿಂದ ಉಡುಪಿಯೆಡೆಗೆ ಶೀರ್ಷಿಕೆಯಡಿಯಲ್ಲಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶ್ರೀರಾಮ ಸೋನಿಯವರ ಮಥುರಾದ ಸಾಂಝಿ ಪೇಪರ್ ಕಲಾಕೃತಿಗಳ ಕಲಾ ಪ್ರದರ್ಶನವನ್ನು ಬಡಗುಪೇಟೆಯ ಗ್ಯಾಲರಿಯಲ್ಲಿ ಆಯೋಜಿಸಲಾಗಿದೆ.

ಜ.22ರಂದು ಸಂಜೆ 4:30ಕ್ಕೆ ಉಡುಪಿಯ ಆರ್ಕಿಟೆಕ್ಟ್ ಶ್ರೀಜಾ ಜಯಕುಮಾರ್ ಕಲಾಪ್ರದರ್ಶನವನ್ನು ಉದ್ಘಾಟಿಸಲಿರುವರು. ದೇಶೀಯ ಕಲೆಯಾದ ಮಥುರಾದ ಸಾಂಝಿಕಲೆಯು ಪೇಪರ್ ಕಟ್ಟಿಂಗ್ ಕಲೆಯಾಗಿದ್ದು, ಟ್ರೀಆಪ್ ಲೈಪ್, ಕೃಷ್ಣನ ಲೀಲೆಗಳು, ಬುದ್ಧ, ನಿಸರ್ಗ ಚಿತ್ರಗಳಿಗೆ ಪ್ರಸಿದ್ಧಿಯನ್ನು ಪಡೆದಿವೆಯಲ್ಲದೇ ಇಂದಿಗೆ ಒಳಾಂಗಣ ವಿನ್ಯಾಸದಲ್ಲಿ ಬಹು ಮಹತ್ವಪೂರ್ಣ ಸ್ಥಾನವನ್ನು ಅಲಂಕರಿಸಿದೆ. ಈ ಕಲಾಪ್ರದರ್ಶನವು ಜ.22ರಿಂದ ಜ.26ರತನಕ ನಡೆಯಲಿದ್ದು, ಅಪರಾಹ್ನ 3ರಿಂದ 7ರ ತನಕ ಕಲಾಸಕ್ತರ ವೀಕ್ಷಣೆಗೆ ತೆರೆದಿರಲಿದೆ.

ಅದರ ಜೊತೆಗೆ ಜನಪದ ಸರಣಿ ಕಲಾ ಕಾರ್ಯಾಗಾರದ 16 ಆವೃತ್ತಿಯು ಅ.25ರಂದು ಬೆಳಿಗ್ಗೆ 9:30 ಉದ್ಯಮಿ ಅಜ್ ಪಿ.ಶೆಟ್ಟಿ ಉದ್ಘಾಟಿಸಲಿರುವರು. ಈ ಕಾರ್ಯಾಗಾರದ ಭಾಗವಾಗಿ ಸಾಂಝಿ ಕಲೆ ಹಾಗೂ ನೀರಿನ ಮೇಲೆ ರಂಗೋಲಿಯನ್ನು ಹಾಕಿ ಕೃಷ್ಣನನ್ನು ಆರಾಧಿಸುವ ಜಲ ಸಾಂಝಿಕಲೆಯನ್ನು ಈ ಬಾರಿ ಪರಿಚಯಿಸುತ್ತಿದ್ದು, ಮಥುರಾದ ರಾಮ ಸೋನಿ ಈ ಕಾರ್ಯಾಗಾ ನಡೆಸಿಕೊಡಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಯೋಜಕ ಡಾ.ಜನಾರ್ದನ ಹಾವಂಜೆ(9845650544) ಅ ವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News