ಭಾರತೀಯ ವಿಕಾಸ ಟ್ರಸ್ಟ್‌ಗೆ ನಬಾರ್ಡ್ ಅಧಿಕಾರಿಗಳ ಭೇಟಿ
ಮಣಿಪಾಲ, ಜ.29: ನೇಶನಲ್ ಬ್ಯಾಂಕ್ ಫಾರ್ ಅಗ್ರಿಕಲ್ಚರ್ ಆ್ಯಂಡ್ ರೂರಲ್ ಡೆವಲಪ್‌ಮೆಂಟ್ (ನಬಾರ್ಡ್) ಸಂಸ್ಥೆಯ ವಿವಿಧ ರಾಜ್ಯಗಳ ಹಿರಿಯ ವ್ಯವಸ್ಥಾಪಕರ ತಂಡ ತಮ್ಮ ಅಧ್ಯಯನ ಭೇಟಿ ಪ್ರಯುಕ್ತ ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್ (ಬಿವಿಟಿ) ಸಂಸ್ಥೆಗೆ ಭೇಟಿ ನೀಡಿತು.
ಈ ವೇಳೆ ಸಂಸ್ಥೆಯ ಕಾರ್ಯಕ್ರಮ, ಅವುಗಳ ಅನುಷ್ಠಾನ, ಸಂಸ್ಥೆಯ ಬೆಳವಣಿಗೆ ಕುರಿತು ಮಾಹಿತಿಗಳನ್ನು ಕೇಳಿ ತಿಳಿದುಕೊಂಡರು. ಭಾರತೀಯ ವಿಕಾಸ ಟ್ರಸ್ಟ್‌ನ ಹಿರಿಯ ಸಲಹೆಗಾರರಾದ ಜಗದೀಶ್ ಪೈ ಇವರು ಸಂಸ್ಥೆ ಪ್ರಾರಂಭ ಗೊಂಡ ಉದ್ದೇಶ ಹಾಗೂ ಸಂಸ್ಥೆಯ ರೂವಾರಿಯಾದ ಪದ್ಮಶ್ರೀ ಟಿ.ಎ.ಪೈ ಇವರ ಗ್ರಾಮೀಣಾಭಿವೃದ್ಧಿ, ಸಮಾಜ ಅಭಿವೃದ್ಧಿ ಕನಸಿನ ಬಗ್ಗೆ, ವಸಂತಿ ಪೈ ಹಾಗೂ ಕೆ.ಎಮ್.ಉಡುಪ ಅವರ ದೂರದೃಷ್ಟಿ ಯೋಜನೆ ಗಳ ಕುರಿತು ವಿವರಿಸಿದರು.
ಬಿವಿಟಿಯ ಹಿರಿಯ ಅಧಿಕಾರಿ ಮನೋಹರ್ ಕಟಗೇರಿ ಇವರು ಬಿವಿಟಿಯ ಕಾರ್ಯಕ್ರಮಗಳಾದ ಮಹಿಳಾ ಸಬಲೀಕರಣ, ಕೃಷಿ, ಸುಸ್ಥಿರ ಸೌರ ಶಕ್ತಿ ಯೋಜನೆಗಳ ಬಗ್ಗೆ ಅಧಿಕಾರಿಗಳಿಗೆ ವಿವರಿಸಿದರು. ಕಾರ್ಯಕ್ರಮ ವ್ಯವಸ್ಥಾಪಕ ಜೀವನ್ ಕೊಲ್ಯ ಸಂಸ್ಥೆಯ ಯೋಜನೆ ಕುರಿತು ಮಾಹಿತಿ ನೀಡಿದರು.
ನಬಾರ್ಡ್ ಸಂಸ್ಥೆಯ ಅಧಿಕಾರಿ ಡಿಜಿಎಂ ಸತೀಸನ್ ಕರ್ತಾ ನಬಾರ್ಡ್ ಜೊತೆ ಸಂಸ್ಥೆ ಹೊಂದಿರುವ ಕಾರ್ಯತತ್ಪರತೆ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ದೇಶದ ವಿವಿಧ ರಾಜ್ಯಗಳ ಒಟ್ಟು 43 ಅಧಿಕಾರಿಗಳ ತಂಡ ಬಿವಿಟಿ ಸಮಾಜದ ಅಭಿವೃದ್ಧಿಯಲ್ಲಿ ಬಿವಿಟಿ ಸಂಸ್ಥೆ ನೀಡಿದ ಉತ್ತಮ ಪರಿಣಾಮಗಳ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.
ಸಂಸ್ಥೆಯ ಆಡಳಿತಾಧಿಕಾರಿ ಮಹೇಶ್ ಭಟ್ ಸ್ವಾಗತಿಸಿ, ಬಿವಿಟಿಯ ಹಣಕಾಸು ಅಧಿಕಾರಿ ಹೆಚ್.ಆರ್ ಕೃಷ್ಣದಾಸ ವಂದಿಸಿದರು.