×
Ad

ಉಡುಪಿ ಸೀರೆಗಳ ಉತ್ಪಾದನೆ -ಸ್ವಉದ್ಯೋಗಕ್ಕೆ ನೇರ ಸಂದರ್ಶನ

Update: 2024-01-02 18:29 IST

ಉಡುಪಿ, ಜ.2: ಜಿಐ ಟ್ಯಾಗ್ ಹೊಂದಿರುವ ಜನಪ್ರಿಯ ಉಡುಪಿ ಸೀರೆಗಳ ಉತ್ಪಾದನೆಗಾಗಿ 6 ತಿಂಗಳ ತರಬೇತಿ ಮತ್ತು ಉದ್ಯೋಗಕ್ಕೆ ನೇರ ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ಮಾಡಲಾಗುವುದು.

ತರಬೇತಿಗೆ ಮಾಸಿಕ ತಲಾ 8,000ರೂ. ತರಬೇತಿ ವೇತನ ಮತ್ತು ಉಪಹಾರ ನೀಡಲಾಗುವುದು. ತರಬೇತಿಯ ಬಳಿಕ ಮಾಸಿಕ ತಲಾ 15,000ರೂ. ಹಾಗೂ ನೈಪುಣ್ಯತೆ ಪಡೆದಂತೆ ಮಾಸಿಕ ತಲಾ 25,000ರೂ. ಅಧಿಕ ಸಂಪಾದನೆ ಮಾಡುವ ಅವಕಾಶ ದೊರೆಯಲಿದೆ.

ನೇರ ಸಂದರ್ಶನವು ಉಡುಪಿ ಜಿಲ್ಲಾ ಪಂಚಾಯತ ಕಟ್ಟಡ(ಬನ್ನಂಜೆ)ದ ತಳ ಅಂತಸ್ತಿನ ಕೈಮಗ್ಗ ಕೇಂದ್ರದಲ್ಲಿ ಜ.5ರಂದು ಬೆಳಗ್ಗೆ 10:30ರಿಂದ ನಡೆಯಲಿದೆ. ಮಹಿಳೆಯರಿಗೆ ಮತ್ತು ನೇಕಾರಿಕೆ ಹಿನ್ನೆಲೆ ಇರುವವರಿಗೆ ಮೊದಲ ಆದ್ಯತೆ ನೀಡಲಾಗುವುದು. ಸಂದರ್ಶನಕ್ಕೆ ಬರುವಾಗ ವಿದ್ಯಾರ್ಹತೆ ದಾಖಲೆ, ಆಧಾರ್ ಕಾರ್ಡ್ ಫೋಟೋ ತರಬೇಕು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ - 9844993565ಕ್ಕೆ ಸಂಪರ್ಕಿಸಬಹುದು ಎಂದು ಉಡುಪಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘದ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News