×
Ad

ವಸತಿ ಶಾಲೆಗಳಿಗೆ ಅರ್ಜಿ ಆಹ್ವಾನ

Update: 2025-01-20 19:28 IST

ಉಡುಪಿ, ಜ.20: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಜಿಲ್ಲೆಯ ಮೊರಾರ್ಜಿ ದೇಸಾಯಿ, ಇಂದಿರಾಗಾಂಧಿ, ಡಾ.ಬಿ.ಆರ್ ಅಂಬೇಡ್ಕರ್ ಹಾಗೂ ನಾರಾಯಣ ಗುರು ವಸತಿ ಶಾಲೆಗಳಲ್ಲಿ 2025-26ನೇ ಸಾಲಿಗೆ 6ನೇ ತರಗತಿ ದಾಖಲಾತಿಗಾಗಿ ಆಸಕ್ತ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ವಿದ್ಯಾರ್ಥಿಗಳು ಪ್ರವೇಶಾತಿಗಾಗಿ ಹತ್ತಿರದ ವಸತಿ ಶಾಲೆಗಳಲ್ಲಿ ಜನವರಿ 25ರ ಒಳಗೆ ಅರ್ಜಿ ಸಲ್ಲಿಸಬಹುದು. ಪ್ರವೇಶ ಪರೀಕ್ಷೆಯು ಫೆಬ್ರವರಿ 15ರಂದು ನಡೆಯಲಿದ್ದು, ಹೆಚ್ಚಿನ ಮಾಹಿತಿಗಾಗಿ ಪ್ರಾಂಶುಪಾಲರುಗಳಾದ ಮೊರಾರ್ಜಿ ದೇಸಾಯಿ ವಸತಿ ಶಾಲೆ ಆರೂರು ಮೊ.ನಂ: 9482625925, ಕಳತ್ತೂರು ಮೊ.ನಂ:9535225409, ಪಟ್ಲ ಹಿರೇಬೆಟ್ಟು ಮೊ.ನಂ; 8970292710, ಹೆರಂಜಾಲು ಮೊ.ನಂ: 8073860074, ಮಿಯ್ಯಾರು ಮೊ.ನಂ:9686898326 ಹಾಗೂ ಯಡ್ಯಾಡಿ-ಮತ್ಯಾಡಿ ಮೊ.ನಂ: 9901519126, ಶಂಕರನಾರಾಯಣ ಡಾ.ಬಿ.ಆರ್ ಅಂಬೇಡ್ಕರ್ ವಸತಿ ಶಾಲೆ ಮೊ.ನಂ: 6363120177, ಸಿದ್ದಾಪುರದ ಇಂದಿರಾಗಾಂಧಿ ವಸತಿ ಶಾಲೆ ಮೊ.ನಂ: 9482487266 ಮತ್ತು ವಡ್ಡರ್ಸೆ ನಾರಾಯಣ ಗುರು ವಸತಿ ಶಾಲೆ ಮೊ.ನಂ: 8867415291ನ್ನು ಸಂಪರ್ಕಿಸಬಹುದು ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರ ಕಚೇರಿ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News