×
Ad

ಎ.ಪಿ.ಕೊಡಂಚರಿಗೆ ‘ಸೇವಾಭೂಷಣ’ ಪ್ರಶಸ್ತಿ

Update: 2025-02-18 20:09 IST

ಉಡುಪಿ, ಫೆ.18: ಯಕ್ಷಗಾನ ಕಲಾರಂಗದಲ್ಲಿ 27 ವರ್ಷಗಳ ಕಾಲ ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಎಸ್. ಗೋಪಾಲಕೃಷ್ಣ ಇವರ ನೆನಪಿನಲ್ಲಿ ಸಂಸ್ಥೆ ನೀಡುವ ‘ಸೇವಾಭೂಷಣ ಪ್ರಶಸ್ತಿ’ಗೆ 25 ವರ್ಷ ಗಳಿಗೂ ಅಧಿಕ ಕಾಲ ಬಳಕೆ ದಾರರ ವೇದಿಕೆಯಲ್ಲಿ ಸೇವೆ ಸಲ್ಲಿಸಿ ಸಾವಿರಾರು ಮಂದಿ ಬಳಕೆದಾರರಿಗೆ, ಸಂತ್ರಸ್ತರಿಗೆ ಮಾರ್ಗದರ್ಶನ ನೀಡಿರುವ ಎ.ಪದ್ಮನಾಭ ಕೊಡಂಚ ಆಯ್ಕೆಯಾಗಿದ್ದಾರೆ.

ಕಾರ್ಪೊರೇಶನ್ ಬ್ಯಾಂಕ್‌ನ ನಿವೃತ್ತ ಅಧಿಕಾರಿಯಾಗಿರುವ ಎ. ಪದ್ಮನಾಭ ಕೊಡಂಚ ಬಳಕೆದಾರರಿಗಾಗಿ ಅನೇಕ ಕಮ್ಮಟ-ಕಾರ್ಯಗಾರಗಳನ್ನು ನಡೆಸಿದ್ದಲ್ಲದೇ ಅನೇಕ ಗ್ರಾಹಕ ಜಾಗೃತಿ ಕೃತಿಗಳನ್ನು ಹೊರತಂದಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭ ಫೆ.28ರ ಶುಕ್ರವಾರ ಸಂಜೆ 5:00ಕ್ಕೆ ಯಕ್ಷಗಾನ ಕಲಾರಂಗದ ಐವೈಸಿ ಸಭಾಭವನದಲ್ಲಿ ಜರಗಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಎಂ.ಗಂಗಾಧರ ರಾವ್ ಹಾಗೂ ಕಾರ್ಯದರ್ಶಿ ಮುರಲಿ ಕಡೆಕಾರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News