×
Ad

ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ ಖಂಡನೀಯ: ರಮೇಶ್ ಕಾಂಚನ್

Update: 2025-04-23 19:41 IST

ಉಡುಪಿ, ಎ.23: ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆಸಿ ಮೂವರು ಕನ್ನಡಿಗರು ಸೇರಿದಂತೆ 26 ಜನರ ಮಾರಣ ಹೋಮ ನಡೆಸಿದ ಭಯೋತ್ಪಾದಕರ ಹೇಯ ಕೃತ್ಯ ತೀರಾ ಖಂಡನೀಯ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ತಿಳಿಸಿದ್ದಾರೆ.

ಕಾಶ್ಮೀರದಲ್ಲಿ ಈ ದುರ್ಘಟನೆ ನಡೆದ ಕೆಲವೇ ಹೊತ್ತಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳ ಸಭೆ ನಡೆಸಿ ಅಲ್ಲಿನ ಮಾಹಿತಿ ಪಡೆದು ಸಚಿವ ಸಂತೋಷ್ ಲಾಡ್ ಸಹಿತ ಅಧಿಕಾರಿಗಳ ತಂಡವನ್ನು ಅಲ್ಲಿಗೆ ಕಳುಹಿಸಿ ಕನ್ನಡಿಗರ ರಕ್ಷಣೆಗೆ ಕೂಡಲೇ ಕಾರ್ಯಪ್ರವತ್ತರಾಗುವಂತೆ ಸೂಚಿಸಿದ್ದಾರೆ. ಈ ಘೋರ ಕೃತ್ಯದ ಹಿಂದಿರುವ ಎಲ್ಲ ದುಷ್ಟ ಶಕ್ತಿಗಳನ್ನು ಸದೆಬಡಿಯುವಲ್ಲಿ ಕೇಂದ್ರ ಸರಕಾರ ಕೂಡಲೇ ಕಾರ್ಯಪ್ರವೃತ್ತರಾಗ ಬೇಕಾಗಿದೆ. ದೇಶ ರಕ್ಷಣೆಯ ವಿಚಾರದಲ್ಲಿ ಪಕ್ಷ, ಧರ್ಮಗಳನ್ನು ಬದಿಗಿಟ್ಟು ಎಲ್ಲರೂ ಒಂದಾಗಿ ರಾಷ್ಟ್ರದ ರಕ್ಷಣೆಗೆ ನಿಲ್ಲಲ್ಲಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News