×
Ad

ಉಡುಪಿ ರಸ್ತೆ ಬಳಕೆದಾರರ 'ನರಕ' ಸಂತೆಕಟ್ಟೆ ರಸ್ತೆ ಅವ್ಯವಸ್ಥೆ ಮುಕ್ತಿಗೆ ಸುಂದರ ಹಾಡು ರಚನೆ

Update: 2024-09-21 12:18 IST

ಉಡುಪಿ, ಸೆ.21: ಕಟಪಾಡಿ ನಿವಾಸಿ ಮದನ್ ಮಣಿಪಾಲ್ ಎಂಬವರು ಈ ಹಿಂದೆ ಕಟಪಾಡಿ ಶಿರ್ವ ರಸ್ತೆ ಅವ್ಯವಸ್ಥೆ ಬಗ್ಗೆ ಹಾಡು ರಚಿಸಿದ್ದು ಅದು ಭಾರೀ ವೈರಲ್ ಆಗಿತ್ತು. ಮಾತ್ರವಲ್ಲ, ಆ ರಸ್ತೆ ರಿಪೇರಿಯನ್ನೂ ಕಂಡಿತ್ತು.

ನಂತರದ ದಿನಗಳಲ್ಲಿ ಸಾರ್ವಜನಿಕರು ಉಡುಪಿಯ ಸಂತೆಕಟ್ಟೆ ರಸ್ತೆ ಅವ್ಯವಸ್ಥೆ ಕುರಿತು ಹಾಡು ರಚನೆ ಮಾಡುವಂತೆ ವಿನಂತಿ ಮಾಡುತ್ತಲೇ ಇದ್ದರು.ಇದೀಗ ಸಂತೆಕಟ್ಟೆ ರಸ್ತೆ ಅವ್ಯವಸ್ಥೆ ಕುರಿತು ತಾವೇ ಹಾಡು ರಚಿಸಿ ,ಹಾಡಿದ್ದು ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಸಂತೆಕಟ್ಟೆ ಅಂಡರ್ ಪಾಸ್ ಕಾಮಗಾರಿ ಅವ್ಯವಸ್ಥೆಯಿಂದಾಗಿ ಈ ಭಾಗದ ಸವಾರರಿಗೆ ಸಿಂಹಸ್ವಪ್ನವಾಗಿ ಕಾಡುತ್ತಿದೆ.ಇಲ್ಲಿ ರಸ್ತೆಯ ದೆಸೆಯಿಂದಾಗಿ ಅಪಘಾತಗಳು ನಡೆದಿದ್ದಕ್ಕೆ ಲೆಕ್ಕವೇ ಇಲ್ಲ.ಹಾಗೆ ಅಪಘಾತಕ್ಕೆ ಈಡಾದವರು ಮದನ್ ಅವರಿಗೆ ಫೋಟೋ ಕಳಿಸಿಕೊಡುತ್ತಿದ್ದರು.ಮಾತ್ರವಲ್ಲ ,ಒಮ್ಮೆ ಮದನ್ ಅವರ ಕಣ್ಣೆದುರೇ ಇಲ್ಲಿ ಅಪಘಾತ ಸಂಭವಿಸಿತ್ತು.ಈ ಹಿನ್ನೆಲೆಯಲ್ಲಿ ಅವರು ಸುಂದರ ಹಾಡು ಬರೆದು ,ಹಾಡಿದ್ದು ಇದು ಯಾರನ್ನೂ ಕೆಣಕುವ ಉದ್ದೇಶದಿಂದ ಹಾಡಿದ್ದಲ್ಲ.ಹಾಡಿನ ಕಾರಣಕ್ಕಾದರೂ ಈ ರಸ್ತೆಗೆ ಮುಕ್ತಿ ಸಿಗಲಿ ಎಂದು ಹೇಳಿದ್ದಾರೆ.

ಇದೇ ರಸ್ತೆಯಲ್ಲಿ ನಿತ್ಯ ಪ್ರಯಾಣಿಸುವ ಖ್ಯಾತ ವಕೀಲ ಬಿ.ನಾಗರಾಜ್ ಮಾತನಾಡಿ ,ಮದನ್ ಅವರು ಕಟಪಾಡಿ ಶಿರ್ವ ರಸ್ತೆ ಬಗ್ಗೆ ಹಾಡು ರಚಿಸಿದಾಗ ಅದು ರಿಪೇರಿ ಕಂಡಿತ್ತು.ಈಗ ಸಂತೆಕಟ್ಟೆ ಕುರಿತೂ ಹಾಡು ಮಾಡಿದ್ದಾರೆ.ಶೀಘ್ರ ಈ ರಸ್ತೆಯೂ ರಿಪೇರಿ ಕಾಣಲಿ ಎಂದು ಹೇಳಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News