×
Ad

ಉಡುಪಿ: ವಾರಾಹಿ ಯೋಜನೆಗೆ ಸಂಬಂಧಿಸಿದ ಶೆಡ್ ನಲ್ಲಿ ಬೆಂಕಿ ಅವಘಡ

Update: 2023-10-17 18:59 IST

ಉಡುಪಿ: ಪಕ್ಕಿಬೆಟ್ಟು ರಸ್ತೆಯ ವಾರಾಹಿ ಯೋಜನೆಗೆ ಸಂಬಂಧಿಸಿದ ಶೆಡ್ ನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು ಇದರಿಂದ ಅಪಾರ ಮೌಲ್ಯದ ಸೊತ್ತುಗಳು ಹಾನಿಯಾಗಿವೆ.

ಇಂದು ಸಂಜೆ ವೇಳೆ ಶೆಡ್ ನಲ್ಲಿ ಅಕಸ್ಮಿಕವಾಗಿ ಬೆಂಕಿ‌ ಕಾಣಿಸಿಕೊಂಡಿದ್ದು, ಬೆಂಕಿ ಕೆನ್ನಾಲಿಗೆ ಇಡೀ‌ ಶೆಡ್‌ಗೆ ವಿಸ್ತರಿಸಿತು. ಇದರಿಂದ ಶೆಡ್ ನಲ್ಲಿದ್ದ ವಾರಾಹಿ ಕುಡಿಯುವ ನೀರಿಗೆ ಸಂಬಂದಿಸಿದ ಪೈಪ್‌ ಹಾಗೂ ಇನ್ನಿತರ ಪರಿಕರಗಳು ಸಂಪೂರ್ಣ ಸುಟ್ಟು ಹೋಗಿವೆ.

ಇದೇ ಶೆಡ್ ನಲ್ಲಿ 50ಕ್ಕೂ ಅಧಿಕ‌ ಕಾರ್ಮಿಕರ ಕುಟುಂಬಗಳು ವಾಸಿಸುತ್ತಿದ್ದು ಅವಘಡ ಸಂದರ್ಭ ಅಲ್ಲಿದ್ದ ಕಾರ್ಮಿಕರು ಹೊರಗಡೆ ಓಡಿ ಬಂದು ಅಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಆಗಮಿಸಿರುವ ಉಡುಪಿ ಅಗ್ನಿಶಾಮಕ ದಳದ ಅಧಿಕಾರಿ ಹಾಗೂ ಸಿಬ್ಬಂದಿ ಎರಡು ವಾಹನಗಳಲ್ಲಿ ಬೆಂಕಿ ನಂದಿಸುವ ಕಾರ್ಯ ನಡೆಸುತ್ತಿದ್ದಾರೆ.










Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News