×
Ad

ಭಟ್ಕಳದ ಅಂಜುಮನ್ ವಿದ್ಯಾರ್ಥಿನಿಯರಿಗೆ ಬಿಬಿಎ ಪರೀಕ್ಷೆಯಲ್ಲಿ ರ‍್ಯಾಂಕ್

Update: 2025-08-16 17:54 IST

ಭಟ್ಕಳ: ಅಂಜುಮನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ & ಕಂಪ್ಯೂಟರ್ ಅಪ್ಲಿಕೇಶನ್ (AIMCA) ಸಂಸ್ಥೆಯ ಮೂವರು ವಿದ್ಯಾರ್ಥಿನಿಯರು ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ನಡೆಸಿದ ಬಿಬಿಎ ಪರೀಕ್ಷೆಯಲ್ಲಿ ಟಾಪ್ 10 ರ‍್ಯಾಂಕ್ ಗಳನ್ನು ಪಡೆದು ಸಂಸ್ಥೆಗೆ ಕೀರ್ತಿ ತಂದಿದ್ದಾರೆ.

 ಫಾತಿಮಾ ನಾಜ್ನೀನ್ 3937/4250 (92.64%) ಅಂಕಗಳೊಂದಿಗೆ 3ನೇ ರ‍್ಯಾಂಕ್,  ಮಲೀಹಾ ಜುಬಾಪು 3901/4250 (91.79%) ಅಂಕಗಳೊಂದಿಗೆ 5ನೇ ರ‍್ಯಾಂಕ್ ಮತ್ತು  ಉಮ್ಮೆ ರೂಫೈದಾ 3878/4250 (91.25%) ಅಂಕಗಳೊಂದಿಗೆ 7ನೇ ರ‍್ಯಾಂಕ್ ಪಡೆದು, ಪ್ರಥಮ ದರ್ಜೆ ಡಿಸ್ಟಿಂಕ್ಷನ್‌ನೊಂದಿಗೆ ಯಶಸ್ವಿಯಾಗಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಅಂಜುಮನ್ ಹಾಮಿ-ಎ-ಮುಸ್ಲಿಮೀನ್ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ, AIMCA ಪ್ರಾಂಶುಪಾಲರು ಹಾಗೂ ಬೋಧಕ ಸಿಬ್ಬಂದಿ ಅಭಿನಂದಿಸಿ, ಅವರ ಭವಿಷ್ಯದ ಸಾಧನೆಗೆ ಶುಭ ಹಾರೈಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News