×
Ad

ಭಟ್ಕಳ: ಹೈಟೆಕ್ ಮಾರುಕಟ್ಟೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅನಿವಾಸಿ ಉದ್ಯಮಿ ಅತೀಕುರ್ರಹ್ಮಾನ್ ಮುನೀರಿ

Update: 2025-09-07 22:27 IST

ಭಟ್ಕಳ: ಭಟ್ಕಳ ರಾಬಿತಾ ಸೊಸೈಟಿಯ ಪ್ರಧಾನ ಕಾರ್ಯದರ್ಶಿ ಹಾಗೂ ಪ್ರಸಿದ್ಧ ಅನಿವಾಸಿ ಭಾರತೀಯ ಉದ್ಯಮಿ ಅತೀಕುರ್ರಹ್ಮಾನ್ ಮುನೀರಿ ಅವರು ಆಸ್ಪತ್ರೆ ರಸ್ತೆಯಲ್ಲಿನ ನೂತನ ಹೈಟೆಕ್ ಮೀನು ಮಾರುಕಟ್ಟೆಗೆ ಭೇಟಿ ನೀಡಿ, ಅದನ್ನು ದುಬೈ ಮೀನು ಮಾರುಕಟ್ಟೆಯೊಂದಿಗೆ ಹೋಲಿಸಿದರು.

ಮಾಧ್ಯಮದೊಂದಿಗೆ ಮಾತನಾಡಿದ ಅವರು, ಈ ಮಾರುಕಟ್ಟೆಗೆ ಕಾಲಿಟ್ಟಾಗ ಗಲ್ಫ್ ದೇಶಗಳಲ್ಲಿರುವ ಮೀನು ಮಾರುಕಟ್ಟೆಗಳ ನೆನಪು ಆಯಿತು ಎಂದು ತಿಳಿಸಿದರು. “ಸಂಪೂರ್ಣ ಸ್ವಚ್ಛತೆಯ ವಾತಾವರಣ, ಉತ್ತಮ ಪಾರ್ಕಿಂಗ್ ಸೌಲಭ್ಯ, ಸಂತೆ ಮಾರುಕಟ್ಟೆ ಹಾಗೂ ಇತರೆ ಸೌಲಭ್ಯಗಳ ಸಮೀಪವಿರುವ ಅನುಕೂಲತೆ ಇವೆಲ್ಲವೂ ಸೇರಿ ಈ ಮಾರುಕಟ್ಟೆಯನ್ನು ಮಾದರಿ ಮಾರುಕಟ್ಟೆಯನ್ನಾಗಿ ಮಾಡಿದಂತಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

“ಗಲ್ಫ್‌ನಿಂದ ಬರುವವರು ಸಹ ಇಲ್ಲಿ ಅಸಹ್ಯ, ಅಶುದ್ಧತೆ ಅಥವಾ ದುರ್ವಾಸನೆ ಅನುಭವಿಸದೇ ಸುಲಭವಾಗಿ ಖರೀದಿ ಮಾಡಬಹುದು. ನಾನೇ ಸ್ವತಃ ಇಲ್ಲಿ ಬಂದಾಗ ದುಬೈನ ಮೀನು ಮಾರುಕಟ್ಟೆಯಲ್ಲಿರುವಂತೆ ಅನಿಸಿತು” ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಯೋಜನೆಯನ್ನು ಯಶಸ್ವಿಗೊಳಿಸಲು ಸಹಕರಿಸಿದ ಭಟ್ಕಳ ಪುರಸಭೆ ಹಾಗೂ ಸರ್ಕಾರಿ ಅಧಿಕಾರಿಗಳಿಗೆ ವಿಶೇಷ ಧನ್ಯವಾದಗಳನ್ನು ಸಲ್ಲಿಸಿದ ಅವರು, ವಿಶೇಷವಾಗಿ ಜಿಲ್ಲಾಧಿಕಾರಿ, ಸಹಾಯಕ ಆಯುಕ್ತರು, ತಹಸೀಲ್ದಾರ್, ಮುಖ್ಯಾಧಿಕಾರಿ, ಪುರಸಭೆ ಅಧ್ಯಕ್ಷರು ಹಾಗೂ ಎಲ್ಲಾ ಸದಸ್ಯರಿಗೆ ನಾನು ಋಣಿ” ಎಂದ ಅವರು, ಹೈಟೆಕ್ ಮೀನು ಮಾರುಕಟ್ಟೆ ಭಟ್ಕಳದ ಸ್ವಚ್ಛತೆ, ಸೌಕರ್ಯ ಮತ್ತು ಆಧುನಿಕ ಸೌಲಭ್ಯಗಳ ಹೊಸ ಮಾದರಿಯಾಗಿದೆ ಎಂದು ಅವರು ಶ್ಲಾಘಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News