ರಾಷ್ಟ್ರೀಯ ಕರಾಟೆ ಟೂರ್ನಿಯಲ್ಲಿ ನ್ಯೂ ಶಮ್ಸ್ ಶಾಲಾ ವಿದ್ಯಾರ್ಥಿ ಫಲಾಹ್ ಗೆ ಚಿನ್ನದ ಪದಕ
ಭಟ್ಕಳ: ನ್ಯೂ ಶಮ್ಸ್ ಶಾಲೆಯ 9ನೇ ತರಗತಿ ವಿದ್ಯಾರ್ಥಿ ಫಲಾಗ್ ಎಂ.ಜೆ. ರಾಷ್ಟ್ರೀಯ ಮಟ್ಟದ ಕರಾಟೆ ಟೂರ್ನಿ ಯಲ್ಲಿ ಚಿನ್ನದ ಪದಕ ಜಯಿಸಿದ್ದಾನೆ.
ಬೆಂಗಳೂರಿನ ಪಡುಕೋಣೆ-ದ್ರಾವಿಡ್ ಸೆಂಟರ್ ಫಾರ್ ಸ್ಪೋರ್ಟ್ಸ್ ಎಕ್ಸಲೆನ್ಸ್ ನಲ್ಲಿ ಸೆಪ್ಟೆಂಬರ್ 14ರಿಂದ 18ರವರೆಗೆ ನಡೆದ ಸಿ.ಐ.ಎಸ್.ಸಿ.ಇ (CISCE) ರಾಷ್ಟ್ರೀಯ ಕರಾಟೆ ಚಾಂಪಿಯನ್‌ಷಿಪ್ 2025ರಲ್ಲಿ ಫಲಾಹ್ ಎಂ.ಜೆ 50 ಕೆ.ಜಿ. ತೂಕದ ಅಂಡರ್-17 ಕುಮಿಟೆ ವಿಭಾಗದಲ್ಲಿ ಉತ್ತಮ ಪ್ರದರ್ಶನ ತೋರಿದರು.
ಅವರು ಬಿಹಾರ–ಝಾರ್ಖಂಡ್ (8–0), ಮಹಾರಾಷ್ಟ್ರ (8–0) ತಂಡಗಳನ್ನು ಸೋಲಿಸಿ, ಕೇರಳದ ವಿರುದ್ಧ ಕಠಿಣ ಪಂದ್ಯದಲ್ಲಿ (3–2) ಗೆಲುವು ಸಾಧಿಸಿ ಚಾಂಪಿಯನ್ ಪಟ್ಟ ಪಡೆದರು. ಹಿಂದೆಯೇ ಫಲಾಹ್ ದಾವಣಗೆರೆಯಲ್ಲಿ ನಡೆದ ವಲಯ ಮಟ್ಟ ಹಾಗೂ ಬೆಂಗಳೂರಿನಲ್ಲಿ ನಡೆದ ಕರ್ನಾಟಕ–ಗೋವಾ ಪ್ರಾದೇಶಿಕ ಟೂರ್ನಿಯಲ್ಲೂ ಚಿನ್ನ ಗೆದ್ದಿದ್ದರು.
ಫಲಾಹ್ ಅವರ ಸಾಧನೆಗೆ ಮಾರ್ಗದರ್ಶನ ನೀಡಿದ ಅಮ್ರ್ ಶಾಬಂದ್ರಿ (Amarsha Karate & Fitness Academy), ಹಾಗೂ ಶಾಲಾ ಆಡಳಿತ ಮಂಡಳಿಗೆ ಶಾಲಾ ಪ್ರಾಂಶುಪಾಲ ಲಿಯಾಖತ್ ಅಲಿ ಕೃತಜ್ಞತೆ ತಿಳಿಸಿದ್ದಾರೆ.